ಮೈತ್ರಿ ಸರ್ಕಾರದಲ್ಲಿ ಈಗ ಏನೋ ಬಿರುಕು ಮೂಡಿದಂತೆ ಕಾಣಿಸ್ತಾಯಿದೆ. ಕಾಂಗ್ರೆಸ್ನಿಂದ ದೂರ ಉಳಿದುಕೊಂಡ ಕೆಲ ಶಾಸಕರು ಆಪರೇಶನ್ ಕಮಲದ ಬಲೆಗೆ ಬಿದ್ದಿದ್ದಾರೆ ಅನ್ನೋ ಆರೋಪ ಕೇಳಿ ಬರುತ್ತಿದೆ.
ಇನ್ನು ಈ ಕುರಿತಂತೆ ಶಾಸಕ ಟಿ.ಡಿ.ರಾಜೇಗೌಡ, ಸಚಿವ ಕೆ ಜೆ ಜಾರ್ಜ್ ಹೇಳಿಕೆಯನ್ನು ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸರ್ಕಾರ ಸುಭದ್ರವಾಗಿದೆ ಸರ್ಕಾರ ಬೀಳುತ್ತೆ ಅನ್ನೋದು ಗಾಸಿಪ್ ಬಿಟ್ರೆ ಬೇರೆ ಏನೂ ಇಲ್ಲ ಅಂತ ರಾಜೇಗೌಡ ಬಿಜೆಪಿಗೆ ಟಾಂಗ್ ನೀಡಿದ್ದಾರೆ.
ಹಾಗೇ ಚಿಕ್ಕಮಗಳೂರಿಗೆ ಆಗಮಿಸಿದ ಸಚಿವ ಕೆ ಜೆ ಜಾರ್ಜ್ ನಮ್ಮ ಶಾಸಕರು ಎಲ್ಲಿ ಹೋಗಲ್ಲ, ಎಲ್ಲಾ ಶಾಸಕರು ನಮ್ಮ ಜೊತೆಯಲ್ಲಿಯೇ ಇದ್ದಾರೆ ಎಂದಿದ್ದಾರೆ.