ಮಕರ ಸಂಕ್ರಾಂತಿಯ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರಂನಲ್ಲಿರುವ ಶ್ರೀ ಪದ್ಮನಾಭಸ್ವಾಮಿ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಪ್ರಧಾನಿ ಜತೆಗೆ ಕೇರಳ ರಾಜ್ಯಪಾಲ ಪಳನಿಸ್ವಾಮಿ ಸದಾಶಿವಂ ಅವರು ದೇಗುಲದಲ್ಲಿ ಪೂಜೆ ಸಲ್ಲಿಸಿದರು. ಈ ವೇಳೆಯಲ್ಲಿ ಸಾಂಪ್ರದಾಯಿಕ ಶೈಲಿಯ ಉಡುಗೆಯಲ್ಲಿ ಮೋದಿ ಕಾಣಿಸಿಕೊಂಡ್ರು.
ನಂತರ ಲೋಕಸಭೆ ಚುನಾವಣೆ ನಿಮಿತ್ತ ಪ್ರಧಾನಿ ಕೊಲ್ಲಂಗೆ ಭೇಟಿ ನೀಡಿದ್ರು. ಇಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮೋದಿ ಶಬರಿಮಲೆ ವಿವಾದದ ವಿಚಾರದಲ್ಲಿ ಕೇರಳ ಸರ್ಕಾರ ನಡೆದುಕೊಂಡ ರೀತಿ ನಾಚಿಕೆಗೇಡು, ಸಿಪಿಎಂ ಸರ್ಕಾರ ಭಕ್ತಿ, ಧರ್ಮದ ಬಗ್ಗೆ ಎಂದೂ ಗೌರವ ಹೊಂದಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.