ಭಾರತದ ಹೆಚ್ಚುವರಿ ಸಾಲಿಟರ್ ಜನರಲ್ ಆಗಿದ್ದ ವಕೀಲ ಕೆ.ಎಂ ನಟರಾಜ್ ಅವರು ಸುಪ್ರೀಂ ಕೋರ್ಟ್‍ನ ಹೆಚ್ಚುವರಿ ಸಾಲಿಟರ್ ಆಗಿ ನೇಮಕಗೊಂಡಿದ್ದಾರೆ.
ಅವರನ್ನು ನೇಮಕ ಮಾಡಿ ಕೇಂದ್ರ ಕಾನೂನು ಸಚಿವಾಲಯ ಆದೇಶ ಹೊರಡಿಸಿದೆ. ಇದಕ್ಕಿಂತ ಮೊದಲು ಭಾರತದ ಹೆಚ್ಚುವರಿ ಸಾಲಿಟರ್ ಜನರಲ್ ಆಗಿ 2015 ರಲ್ಲಿ ನೇಮಕಗೊಂಡಿದ್ದರು.
ಮೂಲತಃ ದಕಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಈಶ್ವರ ಮಂಗಲದವರಾದ ಕೆ.ಎಂ ನಟರಾಜ್ 1992 ರಲ್ಲಿ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿ.ವಿ ಆಚಾರ್ಯ ಅವರ ಸಹಾಯಕರಗಿ ವಕೀಲಿ ಆಗಿದ್ದ ನಟರಾಜ್ 2012 ರಲ್ಲಿ ಹಿರಿಯ ವಕೀಲರಾಗಿ ಬಡ್ತಿ ಹೊಂದಿದ್ದರು.