Saturday, November 23, 2024
ಅಂಕಣ

ಶ್ರೀಪುರಘೊತ್ತಮ | ಕವಿ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ‘ ಗುರುಪಾದಪದ್ಮ ಕವನ ಸರಣಿ – 10 ‘

ಶ್ರೀರಾಮಚಂದ್ರ ಕರುಣಾಚಂದಿರ ಅನುಪಮ ಗುಣನಿಥಿ ಶ್ರೀವಾರಿಧಿ |

ಅಮಿತಾನಂದ ಅಮರಾರವಿಂದ ಅಗಣಿತಗುಣಮಾನ್ಯ ಶ್ರೀಶರಧಿ ||
ದಯಾಮೂರುತಿ ಅಸದಳ ಕೀರುತಿ ನೀಲಾಂಬರಧರ ದಯಾಸಾಗರ |
ಕರುಣಾಸಿಂಧು ಹೇ ದೀನಬಂಧು ವಿಶ್ವವ ವ್ಯಾಪಿಪ ವಿಶ್ವಂಭರ || ೧ ||

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದು ರಾವಣನ ಗರ್ವವ ಮುರಿದು ನುಡಿದೆ ವಿಭೀಷಣಗೆ ನೀತಿಯನು |
ಅಶೋಕವನದಿ ಹನುಮನೊಳುಂಗುರವಿತ್ತು ತೋರಿಪ್ರೀತಿಯ ಸೀತೆಯೊಳು ||
ರಾಜಸಭೆಯೊಳು ಮುರಿದು ಬಿಲ್ಲನು ಸಂತಸಗೊಳಿಸಿದೆ ಜನಕನನು |
ಹದಿನಾಲ್ಕು ವರುಷದ ವನವಾಸದಲಿ ಗಳಿಸಿದೆ ಮಾತಾ ಮಮತೆಯನು || ೨ ||

ಜಾಹೀರಾತು
ಜಾಹೀರಾತು
ಜಾಹೀರಾತು

ಭರತಗೆ ಪಾದುಕೆ ನೀಡಿದ ರಾಮ ರಘುಕುಲ ತಿಲಕ ಶ್ರೀ ಪರಮ |
ನಿರ್ಮಲ ಚಿತ್ತನು ಹನುಮನ ಮಿತ್ರನು ಪರಮಪಾವನ ಶ್ರೀರಾಮ ||
ಉತ್ತಮ ಮಹಿಮರ ಚಿತ್ತದಿ ನೆಲೆಸಿಹ ಸಕಲಗುಣಾರ್ಣವ ಘನಮಹಿಮ |
ಮನುಜರೂಪದಿ ಬಂದ ಜಾನಕಿರಮಣ ದಶರಥನಂದನ ಜಯರಾಮ || ೩ ||

Leave a Response