Saturday, November 23, 2024
ಅಂಕಣ

ಸಾಗರ | ಕವಿ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ‘ ಗುರುಪಾದಪದ್ಮ ಕವನ ಸರಣಿ – 10 ‘

ಸಾಗರವೇ ಶಿವ ಪಾಗರವೇ ಸಗರನ ನಗರವೇ ಭೂಶಿಕ | 

ಸಾಹಸಿಗೆ ಸುಲಭ ಸಹಜವು ಕಠಣವು ಸಂಸಾರ ಸಾಗರ ||
ಸಾಗರದಲೆಗಳು ಬಡಿದೆಬ್ಬಿಸುತಲಿವೆ ಹಳೆನೆನಪಿನ ಮಹಪೂರ |
ವಿಶಾಲವಾದ ಅಂಬರದಾಚಿನ ಮೊಳೆಯುವ ನವಯುಗ ಚಿತ್ತಾರ ||

ಜಾಹೀರಾತು
ಜಾಹೀರಾತು
ಜಾಹೀರಾತು

ಸೂರ್ಯರಶ್ಮಿಯು ಮೆಲುಕಾಡುತಲಿದೆ ಹೃದಯಂಗಳದ ಮಂಗಳ |
ಚಂದಿರನ ಹೂನಗೆ ಮಲ್ಲಿಗೆ ತೆರದಲೆ ಸೆಳೆದೋಡಿವೆ ಕಂಗಳ ||
ಸಾಗರದೊಳು ಒಳಹುದುಗಿವೆ ಏನೋ ಹೊಳಹೊಳಪ ವಜ್ರಗಳು |
ಹುಡುಕಾಡುತ ಒಳ ಒಳ ಹೋದರೆ ಮಿನುಗುವ ಮುತ್ತು ರತ್ನಗಳು ||

ಜಾಹೀರಾತು
ಜಾಹೀರಾತು
ಜಾಹೀರಾತು

ಆಗರ್ಭವೆ ಭೂಗರ್ಭ ಒಡಲೊಳು ಚಿನ್ನವನ್ನು ಹೊತ್ತಿಗೆ ಶ್ರೀಗರ್ಭ |
ನಾರಾಯಣದೇವ ಆದಿಶೇಷನಲಿ ಪವಡಿಪ ನೆಲೆ ಹಿರಣ್ಯಗರ್ಭ ||
ಸಾಗರವೇ ಜನಸಾಗರವೇ ಶ್ರೀವರ ನೆಲೆಸಿಹ ಕೃಪಾಸಾಗರ |
ಸೀತಾರಾಮರ ಅನುಗ್ರಹ ವಿರುವ ಭಕ್ತಿಯ ಆಗರ ಸಾಗರ ||

Leave a Response