Sunday, January 19, 2025
ಸುದ್ದಿ

ಟಿಪ್ಪು ಅವಹೇಳನೆ ಉಪ್ಪಿನಂಗಡಿಯಲ್ಲಿ ಹಿಂ.ಜಾ.ವೇ ಮುಖಂಡ ಮನೋಜ್ ರೈ ಮೇಲೆ ಪ್ರಕರಣ | ಹಿಂ.ಜಾ.ವೇ ಖಂಡನೆ

ಉಪ್ಪಿನಂಗಡಿ : ಸಾಮಾಜಿಕ ಜಾಲ ತಾಣದಲ್ಲಿ ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನ ಕಾರಿಯಾಗಿ ಚಿತ್ರಸಲಾಗಿದೆ ಎಂದು ಹಿಂದೂ ಜಾಗರಣ ವೇದಿಕೆಯ ತಾಲೂಕು ಕಾರ್ಯದರ್ಶಿಗಳಾದ ಶ್ರೀ ಮನೋಜ್ ರೈ ಪೆರ್ನೆ ಇವರ ಮೇಲೆ ಟಿಪ್ಪು ಸುಲ್ತಾನ್ ಕ್ರಿಯಾ ಸಮಿತಿ ಪೆರ್ನೆ ಯ ಕಾರ್ಯದರ್ಶಿಯಾದ ಸಂಶುದ್ದೀನ್ ಉಪ್ಪಿನಂಗಡಿ ಟಾಣೆಗೆ ದೂರು ನೀಡಿದ್ದು, ಇದರ ಬಗ್ಗೆ ಹಿಂದೂ ಜಾಗರಣ ವೇದಿಕೆಯ ತಾಲೂಕು ಸಂಚಾಲಕರಾದ ಬ.ಗಣರಾಜ ಭಟ್ ಕೆದಿಲ ಖಂಡನೆ ಹಾಗು ಸಮರ್ಥನೆ ನೀಡಿದ್ದಾರೆ.

ತಾರೀಖ್-ಎ-ಟಿಪ್ಪು, ಕಿರ್ಮಾನಿ

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಆಧರಿತ ಲೇಖನ ವೊಂದನ್ನು ತುಳುನಾಡ ನ್ಯೂಸ್ ಎನ್ನು facebook ಖಾತೆಯುಲ್ಲಿ ಬಿತ್ತರಿಸಿತ್ತು.
ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಅದನ್ನು ಓದಿದ ಮನೋಜ್ ರೈ ಅವರು ಶೇರ್ ಮಾಡಿಕೊಂಡೊದ್ದರು.ಈ ಸತ್ಯಾಂಶವನ್ನು ಮರೆಮಾಚಿ ಮನೋಜ್ ರೈ ಅವರೇ ಸಾಮಾಜಿಕ ತಾಣದಲ್ಲಿ ಪ್ರಕಟಿಸಿದ್ದಾರೆಂದು ಪೆರ್ನೆಯ ಟಿಪ್ಪು ಕ್ರಿಯಾ ಸಮಿತಿಯವರು ಕೇಸುದಾಕಲಿಸಿದ್ದಾರೆ.ಇದು ಸಮಾಜವನ್ನು ದಾರಿ ತಪ್ಪಿಸಿ ಕೋಮುಗಲಬೆಯನ್ನು ಸೃಷ್ಟಿಸುವ ಶಡ್ಯಂತರವಾಗಿದೆ.
ದಿನಪತ್ರಿಕೆಯಲ್ಲಿ ಬರೆದ ಲೇಖನಕ್ಕಾಗಿ ದಿನ ಪತ್ರಿಕೆ ಮಾರುವಾತನ ಮೇಲೆ ಕೇಸು ದಾಕಲಿಸುವ ಕ್ರಮ ಇದೆಯೇ?
ಹಾಗೆಯೇ
ಯಾರೋ ಬರೆದ ಲೇಖನವನ್ನು ಹಂಚಿಕೊಂಡದಕ್ಕೆ ಸೈಬರ್ ಕ್ರೈಮ್ ನ ಅಡಿಯಲ್ಲಿ ಕೇಸು ದಾಕಲಿಸಲು ಆಗುವುದೇ ಇಲ್ಲ.
ಹಿಂದೂ ವಿರೋದಿ ರಾಜಕಾರಣಿಗಳು ಹಾಗು ಧರ್ಮಾಂದರು ಇದರ ಹಿಂದೆ ಪಿತೂರಿ ನಡೆಸುತ್ತಿದ್ದಾರೆಂದು ಭಟ್ ತಿಳಿಸಿದ್ದಾರೆ.
ಮನೋಜ್ ರೈ ಅವರನ್ನು ಬಂದಿಸುವ ಪ್ರಯತ್ನ ನಡೆಸಿದ್ದಾದರೆ, ತಾಲೂಕಿನಾಧ್ಯಂತ ಹಿಂ.ಜಾ.ವೇ. ಉಗ್ರ ಪ್ರತಿಭಟನೆ ನಡೆಸೂದಾಗಿ ಅವರು ಎಚ್ಚರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response