ಬೆಳ್ತಂಗಡಿ: ಮೇ 1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಚಿತವಾಗಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಅಂದು ಸಂಜೆ 6:48 ಗೋಧೂಳಿ ಲಗ್ನದಲ್ಲಿ 48 ನೇ ವರ್ಷದ ಸಾಮೂಹಿಕ ವಿವಾಹ ನಡೆಯಲಿದೆ.
ಸಾಮೂಹಿಕ ವಿವಾಹ ಮಹೋತ್ಸವದಲ್ಲಿ ಮದುವೆಯಾಗಲಿರುವ ವರನಿಗೆ ದೋತಿ, ಶಾಲು ಮತ್ತು ವಧುವಿಗೆ ಸೀರೆ, ರವಿಕೆ, ಮಂಗಲಸೂತ್ರ ನೀಡಲಾಗುವುದು.
ಮದುವೆಯಾಗಲು ಇಚ್ಚಿಸುವ ಆಸಕ್ತರು ಏಪ್ರಿಲ್ 25 ರೊಳಗೆ ಹೆಸರು ನೋಂದಾಯಿಸಬಹುದಾಗಿದೆ. ಮಾಹಿತಿಗಾಗಿ 08256 -277144 ಸಂಪರ್ಕಿಸುವುದು.