Recent Posts

Sunday, January 19, 2025
ಸುದ್ದಿ

ಯು.ಎ.ಇ ಕರೆನ್ಸಿ ದಿರಮ್ ತೋರಿಸಿ ವಂಚನೆ: ಆರೋಪಿಗಳ ಬಂಧನ – ಕಹಳೆ ನ್ಯೂಸ್

ಯು.ಎ.ಇ. ರಾಷ್ಟ್ರದ ಕರೆನ್ಸಿ ದಿರಮ್ ನೋಟನ್ನು ತೋರಿಸಿ ಜನರನ್ನು ನಂಬಿಸಿ ವಂಚಿಸುವ ಉದ್ದೇಶ ಹೊಂದಿದ್ದ ಆರೋಪಿಗಳನ್ನು ಮಂಗಳೂರು ಉತ್ತರ ಪೊಲೀಸ್‌ರು ಬಂಧಿಸಿದ್ದಾರೆ.

ಮೊಹಮ್ಮದ್ ಸಲೀಂ ಮತ್ತು ನಸ್ರುಲ್ ಇಸ್ಲಾಂ ಎಂಬ ವ್ಯಕ್ತಿಗಳು ಇಬ್ರಾಹಿಂ ಅಲೀಲ್ ಎಂಬವರಿಗೆ ಯುಎಇ ದಿರಮ್ ನೋಟುಗಳನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಲು ಯತ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ರಾಮಕಾಂತಿ ಟಾಕೀಸ್‌ನ ಬಳಿ ಬರಹೇಳಿದ್ದಾರೆ. ಸುಮಾರು 7 ಲಕ್ಷ ರೂಗಳ ನೋಟುಗಳು ಇವೆ ಎಂದು ಹಳೇ ದಿನ ಪತ್ರಿಕೆಗಳ ಬಂಡಲುಗಳಿಗೆ ಮೇಲ್ಬಾಗದಲ್ಲಿ ಏಳು ದಿರಂ ನೋಟುಗಳನ್ನು ಸುತ್ತಿ ತೋರಿಸಿ ವಂಚಿಸಲು ಪ್ರಯತ್ನ ಮಾಡಿದ್ದಾರೆ.

ಆದ್ರೆ ಅಲೀಲ್ ಸಂಶಯಗೊಂಡು ವಿಚಾರಿಸಿದಾಗ ಆರೋಪಿಗಳು ಸ್ಥಳದಿಂದ ಸೊತ್ತು ಸಮೇತ ಪರಾರಿಯಾಗಿದ್ದಾರೆ. ಈ ಕುರಿತಂತೆ ಅಲೀಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.