ಪುತ್ತೂರು ಕಾಂಗ್ರೆಸ್ ಈಗ ಒಡೆದ ಮನೆ | ಶಾಸಕಿ ಶಕುಂತಲಾ ಶೆಟ್ಟಿ, ಬಿ.ಜೆ.ಪಿ.ಯಾ ಕಾಂಗ್ರೆಸ್ಸಾ ಎಂಬುದೇ ಅನುಮಾನ – ಪುರುಶೋತ್ತಮ ರೈ ಆರೋಪ
ಪುತ್ತೂರು : ಕಾಂಗ್ರೆಸ್ ನಲ್ಲಿ ಚುನಾವಣೆಗೆ ನಿಂತು ಕಾರ್ಯಕರ್ತರ ಭಲದಿಂದ ಗೆದ್ದು, ನಂತರ ಕಾಂಗ್ರೇಸ್ ಕಾರ್ಯಕರ್ತರನ್ನು ಮುಗಿಸುವ ಪ್ರಯತ್ನಕ್ಕೆ ಪುತ್ತೂರಿನ ಶಾಸಕಿ ಶಕುಂತಲಾ ಶೆಟ್ಟಿ ಮುಂದಾಗಿದ್ದು ಇದಕ್ಕೆ ನಾನೆ ಸಾಕ್ಷಿಯಾಗಿದ್ದೇನೆ. ಎಂದು ಭೂ ನ್ಯಾಯ ಮಂಡಳಿಯ ಸದಸ್ಯ, ಹಿರಿಯ ಕಾಂಗ್ರೆಸ್ ನಾಯಕ ಒಡಿಯಾರ್ ಪುರುಷೋತ್ತಮ ರೈ ಆರೋಪಿಸಿದ್ದಾರೆ.
ಪರ್ತಕರ್ತರೊಂದಿಗೆ ಮಾತನಾಡಿದ ಅವರು ಶಾಸಕಿಯವರು ಪಕ್ಷದ ಕಾರ್ಯಕರ್ತರನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ. ವಿರೋಧಪಕ್ಷದ ಕಾರ್ಯಕರ್ತರ ಮಾತಿಗೆ ಬೆಲೆ ಕೊಡುತ್ತಾರೆ. ಬಿ.ಜೆ.ಪಿ.ಯವರು ಹೇಳಿದ ಊರಿಗೆ ಅನುದಾನ ನೀಡುತ್ತಾರೆ. ಕಾಂಗ್ರೆಸ್ ಕಾರ್ಯಕರ್ತರಾಗಲಿ, ನಾಯಕರಾಗಲಿ ಅವರ ಬಳಿ ಯಾವುದೇ ವಿಷಯ ಹೇಳಿದರು ಪರಿಗಣನೆಗೆ ತೆಗೆದುಕೊಳ್ಳುದಿಲ್ಲ! ಬಾಯಲ್ಲಿ ಮಾತ್ರ ನಾನು ಕಾಂಗ್ರೆಸ್ಸಿಗಳು ಎಂದು ಹೇಳುತ್ತಾರೆ. ಅವರ ಆತ್ಮ ಇನ್ನೂ ಕಾಂಗ್ರೆಸ್ಸನ್ನು ಒಪ್ಪುತ್ತಿಲ್ಲ, ಬಿ.ಜೆ.ಪಿ. ಆರ್.ಎಸ್.ಎಸ್. ಕಡೆಗೆ ಅವರ ಮನಸ್ಸಿದೆ. ಕಾಂಗ್ರೆಸ್ಸನ್ನು ಮರಳು ಮಾಡುತ್ತಾರೆ ಎಂದು ಹೇಳಿದ್ದಾರೆ.