Recent Posts

Sunday, January 19, 2025
ಸುದ್ದಿ

ಬಂಟ್ವಾಳದ ಯುವತಿ ಪ್ರೀತಿಗಾಗಿ ಮಾಡಿದ್ದೇನು? – ಕಹಳೆ ನ್ಯೂಸ್

ಬಂಟ್ವಾಳ: ಯವನ್ನದಲ್ಲಿ ಪ್ರೀತಿಗೆ ಬಿದ್ದರೆ ಯುವಕರು ಏನೆಲ್ಲಾ ಮಾಡುತ್ತಾರೆಂದು ಊಹಿಸಲು ಬಲು ಮಂದಿಗೆ ಕಷ್ಟ. ಇಲ್ಲೊಬ್ಬಳು ಯುವತಿ ಪ್ರೀತಿಗಾಗಿ ಮನೆಯನ್ನೇ ತೊರೆದಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೀಟಿ ಬರೆದಿಟ್ಟು ಯುವತಿ ಸಂಬಂಧಿಕರ ಮನೆಯಿಂದ ನಾಪತ್ತೆಯಾಗಿರುವುದು ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ. ಪುತ್ತೂರು ತಾಲೂಕಿನ ಉಪ್ಪಿನಂಗಡಿ ಗ್ರಾಮದ ದಡ್ಡು ನಿವಾಸಿ ಉದಯಕುಮಾರ್ ಅವರ ಪುತ್ರಿ ದಿವ್ಯಶ್ರೀ ಎಂಬ ಯುವತಿ ಕಾಣೆಯಾಗಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಿ.ಯು.ಸಿ. ವಿದ್ಯಾಭ್ಯಾಸ ಮುಗಿಸಿದ ಬಳಿಕ ಶಿಕ್ಷಣ ಮುಂದುವರಿಸದ ದಿವ್ಯ ಕಳೆದ ಎರಡು ತಿಂಗಳಿನಿಂದ ಪುಂಜಾಲಕಟ್ಟೆಯ ಮೂಡುಪಡುಕೋಡಿ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದಳು. ಎಂದಿನಂತೆ ಮನೆಯಲ್ಲಿದ್ದ ದಿವ್ಯ ಬೆಳಿಗ್ಗೆಯಿಂದ ಮನೆಯಲ್ಲಿ ಇರದೆ ಕಾಣೆಯಾಗಿದ್ದಾಳೆ.ಇವಳು ಮನೆ ಬಿಟ್ಟು ಹೋಗುವ ವೇಳೆ ಚೀಟಿಯೊಂದನ್ನು ಬರೆದಿಟ್ಟಿದ್ದು ಮನೆಯವರಿಗೆ ಸಿಕ್ಕಿದೆ. ಅದರಲ್ಲಿ ನಾನು ಮನೆ ಬಿಟ್ಟು ಹೋಗುವುದಾಗಿಯೂ ನನ್ನನ್ನು ಹುಡುಕುವ ಪ್ರಯತ್ನ ಬೇಡ, ನಾನು ಪ್ರೀತಿಯನ್ನು ಹುಡುಕಿಕೊಂಡು ಹೋಗುತ್ತಿದ್ದೇನೆ ಎಂದು ಬರೆಯಲಾಗಿದೆ ಎಂದು ಹೇಳಲಾಗಿದೆ.

ಪುಂಜಾಲಕಟ್ಟೆ ಠಾಣೆಯಲ್ಲಿ ದಿವ್ಯಳಾ ತಾಯಿ ಅನಿತಾ ನೀಡಿದ ದೂರಿನಂತೆ ಎಸ್.ಐ.ಸೌಮ್ಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.