ಪುತ್ತೂರು: ತುಳುನಾಡಿನ ಜಾನದಪ ಕ್ರೀಡೆ ಕಂಬಳದ ಕಂಪು ಪುತ್ತೂರು ಮಣ್ಣಿನಲ್ಲಿ ಪರಿಮಳ ಬೀರಿದೆ. ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿ 26ನೇ ವರ್ಷದ ಕೋಟಿ- ಚೆನ್ನಯ ಜೋಡುಕರೆ ಕಂಬಳ ಯಶಸ್ವಿಯಾಗಿ ನಡೆದಿದೆ.
ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸಹಿತ ಸಮಗ್ರ ತುಳುನಾಡಿನ ಮೂಲೆ ಮೂಲೆಗಳಿಂದ 133 ಜೋಡಿ ಕೋಣಗಳು ಪಾಲ್ಗೊಂಡಿದ್ದು, ದೇವಸ್ಥಾನದ ಎದುರಿನ 14 ಎಕರೆ ವಿಶಾಲ ದೇವರಮಾರು ಗದ್ದೆಯಲ್ಲಿ ಜನ ಸಾಗರದ ನಡುವೆ ಕಂಬಳ ಭಾರಿ ಯಶಸ್ಸು ಕಂಡಿತು. ಈಗಾಗಲೇ ಕಂಬಳ ಮುಕ್ತಾಯಗೊಂಡಿದ್ದು ಫಲಿತಾಂಶ ಹೊರಬಿದ್ದಿದೆ.
ಕನಹಲಗೆ ವಿಭಾಗ
ಪ್ರಥಮ: ರಾಕೇಶ್ ಮಲ್ಲಿ
ಓಡಿಸಿದವರು: ನಾರಾವಿ ಯುವರಾಜ ಜೈನ್( 6.5 ನಿಶಾನೆಗೆ ನೀರು ಹಾಯಿಸಿದ್ದಾರೆ)
ದ್ವಿತೀಯ: ನವೀನ್‍ಚಂದ್ರ ಆಳ್ವ
ಓಡಿಸಿದವರು: ಬೈಂದೂರು ಭಾಸ್ಕರ ದೇವಾಡಿಗ (6.5 ಕೋಲು ನಿಶಾನೆಗೆ ನೀರು ಹಾಯಿಸಿದ್ದಾರೆ)
ಹಗ್ಗ ಕಿರಿಯ ವಿಭಾಗ
ಪ್ರಥಮ: ಮೂಡಬಿದ್ರೆ ಕರಿಂಜೆ ವಿನು ವಿಶ್ವನಾಥ ‘ಬಿ’
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಸುಬ್ಬಯ್ಯ ಕೋಟ್ಯಾನ್
ಓಡಿಸಿದವರು: ಕೊಳಕೆ ಇರ್ವತ್ತೂರು ಆನಂದ್
ಹಗ್ಗ ಕಿರಿಯ ವಿಭಾಗ
ಪ್ರಥಮ : ಉಮೇಶ್ ಮಹಾಬಲ ಶೆಟ್ಟಿ
ಓಡಿಸಿದವರು: ಪಣಪಿಲ ಪ್ರವೀಣ್ ಕೋಟ್ಯಾನ್
ದ್ವಿತೀಯ: ರಘುನಾಥ ದೇವಾಡಿಗ
ಓಡಿಸಿದವರು: ಸುಧೀರ್ ಕೊಟ್ಯಾನ್
ಅಡ್ಡ ಹಲಗೆ
ಪ್ರಥಮ : ಶ್ರೀನಿವಾಸ ಶೆಟ್ಟಿ
ಓಡಿಸಿದವರು: ನಾರಾವಿ ಯುವರಾಜ ಜೈನ್
ದ್ವಿತೀಯ: ಬೋಳಾರ ತ್ರಿಶೂಲ್ ಪೂಜಾರಿ
ಓಡಿಸಿದವರು: ಶಿರೂರು ಗೋಪಾಲ ನಾಯ್ಕ
ನೇಗಿಲು ಹಿರಿಯ
ಪ್ರಥಮ : ಬೋಳದ ಗುತ್ತು ಜಗದೀಶ್ ಶೆಟ್ಟಿ ‘ಬಿ’
ಓಡಿಸಿದವರು: ಮರೋಡಿ ಶ್ರೀಧರ್
ದ್ವಿತೀಯ: ಬೋಳದ ಗುತ್ತು ಜಗದೀಶ್ ಶೆಟ್ಟಿ ‘ಎ’
ಓಡಿಸಿದವರು: ಹಕ್ಕೇರಿ ಸುರೇಶ್ ಶೆಟ್ಟಿ
ನೇಗಿಲು ಕಿರಿಯ
ಪ್ರಥಮ :ಪ್ರಸಿದ್ಧ್ ಶಕ್ತಿಪ್ರಸಾದ್ ಶೆಟ್ಟಿ
ಓಡಿಸಿದವರು: ಜಾರಾಡಿ ನತೇಶ್ ಕುಮಾರ್
ದ್ವಿತೀಯ: ಪರಮೇಶ್ವರ ಡೊಂಬಯ್ಯ ಗೌಡ
ಓಡಿಸಿದವರು: ಮರೋಡಿ ಶ್ರೀಧರ್
ಒಟ್ಟಿನಲ್ಲಿ ಈ ಪುತ್ತೂರ ಕಂಬಳ ಹತ್ತೂರನಲ್ಲೂ ಪ್ರಸಿದ್ಧಿ ಪಡೆದಿದೆ.