Recent Posts

Sunday, January 19, 2025
ಸುದ್ದಿ

Big Breaking News : ಅಗಲಿದ ಯಜಮಾನನಿಗೆ ಅರ್ಥಪೂರ್ಣ ಶೃದ್ಧಾಂಜಲಿ ನೀಡಿದ ಕೋಣಗಳು ; ಪುತ್ತೂರು ಕಂಬಳದಲ್ಲಿ ಚಿನ್ನ ಪಡೆದ ದಿವಂಗತ ವಿನು ವಿಶ್ವನಾಥ ಶೆಟ್ಟಿಯವರ ಕೋಣಗಳು – ಕಹಳೆ ನ್ಯೂಸ್

ಪುತ್ತೂರು: ಶನಿವಾರ ಆರಂಭವಾದ ಪುತ್ತೂರಿನ  26 ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳ  ಭಾನುವಾರ ಸಂಜೆಯ ವೇಳೆಗೆ ವಿಜೃಂಭಣೆಯಿಂದ ಸಂಪನ್ನವಾಯಿತು. ಹಗ್ಗ ಹಿರಿಯ ವಿಭಾಗದಲ್ಲಿ ಸ್ಪರ್ಧಿಸಿದ್ದ ಮೂಡಬಿದ್ರೆ ಕರಿಂಜೆ ವಿನು ವಿಶ್ವನಾಥ ಶೆಟ್ಟರ ಕೋಣಗಳು ಪ್ರಥಮ ಸ್ಥಾನ ಪಡೆದು ಇತ್ತೀಚಿಗೆ ಅಗಲಿದ ಪ್ರೀತಿಯ ಯಜಮಾನನಿಗೆ ಅರ್ಥಪೂರ್ಣ ಶ್ರದ್ಧಾಂಜಲಿ ನೀಡಿದವು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಬಳ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದ ವಿನು ವಿಶ್ವನಾಥ್ ಶೆಟ್ಟರು, ಇತ್ತೀಚಿಗೆ ಹೊಕ್ಕಾಡಿಗೋಳಿ ಕಂಬಳದಿಂದ ಹಿಂದೆ ಬರುವ ಸಮಯದಲ್ಲಿ ಹೃದಯಾಘಾತದಿಂದ ಮರಣ ಹೊಂದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೊಕ್ಕಾಡಿಗೋಳಿ ಕಂಬಳದಲ್ಲಿ ವಿನು ವಿಶ್ವನಾಥ್ ಶೆಟ್ಟರ ಕೋಣಗಳು ಪ್ರಥಮ ಸ್ಥಾನ ಪಡೆದಿದ್ದವು. ಆದರೆ ಆ ಸಂತೋಷ ಹೆಚ್ಚು ಸಮಯ ಉಳಿದಿರಲಿಲ್ಲ.  ನಂತರದ ಎರಡು ಕಂಬಳದಲ್ಲಿ ಈ ಕೋಣಗಳು ಭಾಗವಹಿಸಿರಲಿಲ್ಲ.

ಪುತ್ತೂರು ಕಂಬಳ  ಕೂಟದಲ್ಲಿ ಒಟ್ಟು 133 ಜೊತೆ ಕೋಣಗಳು  ಭಾಗವಹಿಸಿದ್ದವು.