Thursday, November 14, 2024
ಸುದ್ದಿ

ಶ್ರೀ ದೊಂಪದಬಳಿ ಗದ್ದೆ, ಧರ್ಮಗಿರಿ, ಅರ್ಕುಳದಲ್ಲಿ ನಡೆದ ಹಿಂದೂ ರಾಷ್ಟ್ರ ಜಾಗೃತಿ ಸಭೆ – ಕಹಳೆ ನ್ಯೂಸ್

ಮಂಗಳೂರು: ಕಲಿಯುಗದಲ್ಲಿ ಭಗತ್ಪ್ರಾಪ್ತಿ ಅತೀ ಶೀಘ್ರವಾಗಿ ಆಗಬೇಕಾದರೆ ಧರ್ಮದ ಆಚರಣೆಗಳನ್ನು ಮಾಡುವುದು ಅವಶ್ಯಕವಾಗಿದೆ. ಸಮಾಜದ ಪ್ರತಿಯೊಬ್ಬರೂ ನೈತಿಕ ಶಿಕ್ಷಣ ನೀಡುವ ಧರ್ಮಶಿಕ್ಷಣ ಪಡೆಯುವ ಅವಶ್ಯಕತೆ ಇದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕ ಶ್ರೀ ವಿವೇಕ್ ಪೈ ಹೇಳಿದರು

ಅವರು ಜನವರಿ 20 ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದು ಶ್ರೀ ದೊಂಪದಬಳಿ ಗದ್ದೆ, ಧರ್ಮಗಿರಿ, ಅರ್ಕುಳದಲ್ಲಿ ಆಯೋಜಿಸಿದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಉದ್ದೇಶಿಸಿ ಮಾತನಾಡಿ

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತವು ಒಂದು ಸ್ವಯಂಭೂ ‘ಹಿಂದೂರಾಷ್ಟ್ರ’ ವಾಗಿದೆ, ಹೀಗಿರುವಾಗಲೂ ಆದರ್ಶವಾದ ಹಿಂದೂರಾಷ್ಟ್ರ ಸ್ಥಾಪಿಸಲು ನಮ್ಮಿಂದ ಇನ್ನೂ ಸಾಧ್ಯವಾಗಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂಗಳ ದೇವಸ್ಥಾನಗಳ ಮೇಲಿನ ಆಕ್ರಮಣಗಳು, ಮೂರ್ತಿಭಂಜನ, ದೇವತೆಗಳ ಅವಮಾನ, ಹಿಂದೂ ನೇತಾರರ ಹತ್ಯೆ, ಹಿಂದೂಗಳ ಯಾತ್ರೆಗಳ ಮೇಲಿನ ತೆರಿಗೆ, ಧರ್ಮಶಾಸ್ತ್ರವನ್ನು ಉಲ್ಲಂಘಿಸುವಂತಹ ತೀರ್ಪನ್ನು ಶಬರಿಮಲೆ ಸಂದರ್ಭದಲ್ಲಿ ನೀಡಲಾಯಿತು; ಆದರೆ ಇದುವರೆಗೂ ರಾಮಮಂದಿರದ ನಿರ್ಮಾಣ ಕಾರ್ಯ ಮಾಡಲು ಸಾಧ್ಯವಾಗಲಿಲ್ಲ.

ಕಾಶ್ಮೀರದಲ್ಲಿ ಇದುವರೆಗೂ ಕಲಂ 370 ರದ್ದುಗೊಳಿಸಲಿಲ್ಲ. ಆದ್ದರಿಂದ 100 ಕೋಟಿಯಷ್ಟು ಹಿಂದೂಗಳಿರುವ ಭಾರತದಲ್ಲಿ ಹಿಂದೂರಾಷ್ಟ್ರದ ಅವಶ್ಯಕತೆ ಇದೆ. 2023 ರಲ್ಲಿ ಸಂತ ಮಹಾತ್ಮರ ಸಂಕಲ್ಪದಂತೆ, ಕಾಲಮಹಾತ್ಮೆಗನುಸಾರವಾಗಿ ಹಿಂದೂರಾಷ್ಟ್ರ ಸ್ಥಾಪನೆಯಾಗಲಿದೆ ಎಂದರು. ಹಿಂದೂ ರಾಷ್ಟ್ರದ ಅಗತ್ಯ ಮತ್ತು ಆ ಒಲವಿನಲ್ಲಿ ಮಾಡಬೇಕಾದ ಪ್ರಯತ್ನಗಳನ್ನು ಶ್ರೀ ವಿವೇಕ್ ಪೈ ಇವರು ತಿಳಿಸಿ ಕೊಟ್ಟರು.

ಅಲ್ಲದೇ ಇದೇ ತಿಂಗಳ 27 ರಂದು ಮಂಗಳೂರಿನ ಶಾರದಾ ವಿದ್ಯಾಲಯ, ಕೊಡಿಯಾಲಬೈಲಿನಲ್ಲಿ ಸಾಯಂಕಾಲ 4.30 ಕ್ಕೆ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಿದ್ದು ಎಲ್ಲರೂ ಇದರಲ್ಲಿ ಪಾಲ್ಗೊಳ್ಳಬೇಕೆಂದೂ ಶ್ರೀ.ಪೈಯವರು ಕರೆ ನೀಡಿದರು.