ಬೆಂಗಳೂರು: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾ, ಪ್ರಸಿದ್ಧ ಗಾಯಕ ಯೇಸುದಾಸ್, ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್, ಹಿರಿಯ ಸಾಹಿತಿ ವೈದೇಹಿ, ಖ್ಯಾತ ನಟ ಮುಖ್ಯಮಂತ್ರಿ ಚಂದ್ರ ಸೇರಿದಂತೆ 62 ಮಂದಿಗೆ 2017ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಸೋಮವಾರ ಪ್ರಕಟಿಸಿದೆ.
2017ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯನ್ನು ನವೆಂಬರ್ 1ರಂದು ಪ್ರದಾನ ಮಾಡಲಾಗುತ್ತಿದೆ. ಭಾಷಾ ತಜ್ಞ ಎಸ್ ಸೈಯದ್ ಅಹ್ಮದ್, ಜಾನಪದ ವಿದ್ವಾಂಸ ರಾಜಶೇಖರ್, ಸಾಹಿತಿ ಡಾ.ಹನುಮಾಕ್ಷಿ ಗೋಗಿ, ನಾಟಕಕಾರ ಬೇಲೂರು ಕೃಷ್ಣಮೂರ್ತಿ, ಯಕ್ಷಗಾನ ಕಲಾವಿದ ಶಿವರಾಮ ಜೋಗಿ, ಬಳ್ಕೂರು ಕೃಷ್ಣಯಾಜಿ, ವಿಠಪ್ಪ ಗೋರಂಟ್ಲಿ, ಸಮಾಜಸೇವಕ ಡಾ.ರವೀಂದ್ರನಾಥ ಡಾ.ರವೀಂದ್ರನಾಥ ಶ್ಯಾನಭಾಗ್ ಸೇರಿದಂತೆ 62 ಮಂದಿ ಗಣ್ಯರಿಗೆ ಪ್ರಶಸ್ತಿ ಘೋಷಿಸಿದೆ.
ನವೆಂಬರ್ 1ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ. ಪ್ರಶಸ್ತಿ ಜತೆ ಒಂದು ಲಕ್ಷ ರೂ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಿ ಸನ್ಮಾನಿಸಲಾಗುತ್ತದೆ.