Monday, January 20, 2025
ಸುದ್ದಿ

ವಿಶ್ವದ ಅತಿ ‘ಹಿರಿಯ’ ವ್ಯಕ್ತಿ ಮನಸಜೊ ನೋನಾಕಾ ಇನ್ನಿಲ್ಲ – ಕಹಳೆ ನ್ಯೂಸ್

ವಿಶ್ವದ ಅತಿ ಹಿರಿಯ ಎನಿಸಿಕೊಂಡ ವ್ಯಕ್ತಿ ಉತ್ತರ ಜಪಾನ್‌ನ ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ. 113 ವರ್ಷದ ಮನಸಜೊ ನೋನಾಕಾ ಭಾನುವಾರ ನಿಧನರಾದರು.

ವಯೋಸಹಜ ಕಾರಣದಿಂದ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ವಿಷಯ ತಿಳಿಯುತ್ತಿದ್ದಂತೆ ಅಜ್ಜನ ನಾಲ್ಕು ತಲೆಮಾರಿನವರು ಧಾವಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

2018 ರಲ್ಲಿ ಇವರನ್ನು ಪ್ರಪಂಚದ ಅತಿ ದೀರ್ಘಾವಧಿ ಜೀವಿಸಿರುವ ವ್ಯಕ್ತಿಯೆಂದು ಗಿನ್ನಿಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಪ್ರಮಾಣ ಪತ್ರ ನೀಡಿತ್ತು. 1905 ಜುಲೈ 5 ರಂದು ಅವರು ಜನಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಕೊನೆಯುಸಿರೆಳೆಯುವ ಮುನ್ನ ಯಾವುದೇ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರಲಿಲ್ಲ, ಶಾಂತಿಯುತವಾಗಿ ಇಹಲೋಕ ತ್ಯಜಿಸಿದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.