Tuesday, January 21, 2025
ಸುದ್ದಿ

Big Breaking News – ಪುತ್ತೂರಿನ ಮುಕ್ವೆ ಬಳಿ ಭೀಕರ ಅಪಘಾತ: ಪಿಕಪ್ ಆಮ್ನಿಗೆ ಡಿಕ್ಕಿ ಹೊಡೆದು ಓರ್ವ ಸಾವು – ಕಹಳೆ ನ್ಯೂಸ್

ಪುತ್ತೂರು: ಪುತ್ತೂರಿನ ಮುಕ್ವೆಯ ಮಸೀದಿ ಬಳಿ ಬೆಳ್ಳಂಬೆಳಿಗ್ಗೆ ಭೀಕರ ಅಪಘಾತ ನಡೆದಿದೆ. ಪುತ್ತೂರು ಕಡೆಯಿಂದ ಮುಕ್ವೆಗೆ ತೆರಳುತ್ತಿದ್ದ ಪಿಕಪ್ ಎದುರಿನಲ್ಲಿದ್ದ ಬೈಕ್‌ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ಆಮ್ನಿಗೆ ಡಿಕ್ಕಿ ಹೊಡೆದು ಭೀಕರ ಅಪಘಾತ ನಡೆದಿದೆ.

ಅಪಘಾತದಲ್ಲಿ ಓಮ್ನಿ ಸಂಪೂರ್ಣ ನಜ್ಜುಗುಜ್ಜಾಗಿದೆ. ಓಮ್ನಿಯಲ್ಲಿದ್ದ ಕೃಷ್ಣ ಭಟ್ ಮತ್ತು ಅವರ ಮಗ ಅವಿನಾಶ್‌ಗೆ ತೀರ್ವ ಗಾಯವಾಗಿದ್ದು ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಕೃಷ್ಣ ಭಟ್  ಅಸುನೀಗಿದ್ದಾರೆ. ಮಗ ಅವಿನಾಶ್‌ರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು