ಕೆಂಪು ಉಗ್ರರವಾದದ ವಿರುದ್ಧ ಸಿಡಿದೆದ್ದ ವಿದ್ಯಾರ್ಥಿಗಳು | ಪುತ್ತೂರಿನಲ್ಲಿ ಧ್ವನಿ ಏರಿಸಿದ ವಿದ್ಯಾರ್ಥಿ ಪರಿಷತ್!
ಪುತ್ತೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರು ಘಟಕ ಇದರ ವತಿಯಿಂದ ಕೇರಳದಲ್ಲಿ ನಡೆಯುತ್ತಿರುವ ಕೆಂಪು ಉಗ್ರರ ಶೋಷಣೆಯ ವಿರುದ್ಧ ಪುತ್ತೂರಿನಲ್ಲಿ ಪ್ರತಿಭಟನೆ ನಡೆಯಿತು.
ಕೇರಳಾದಲ್ಲಿ ಕಮ್ಯುನಿಸ್ಟ್ ನಡೆಸುತ್ತಿರು ಹತ್ಯಾಕಾಂಡ, ನರಮೇಧ ನಿಲ್ಲಬೇಕು, ದೇವರ ನಾಡಿನಲ್ಲಿ ಶಾಂತಿ ನೆಲಸಬೇಕು, ವಿದ್ಯಾರ್ಥಿಗಳ ಹತ್ಯೆಗೆ ಪೂರ್ಣವಿರಾಮ ಹಾಡಬೇಕು ಎಂದು ವಿದ್ಯಾರ್ಥಿ ಪರಿಷತ್ತಿನ ಮಾರ್ಗದರ್ಶನರಾಗ ಡಾ ರೋಹಿಣಾಕ್ಷ ಶೀರ್ಲಾಲ್ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನೆರೆದಿದ್ದರು. ನರಗ ಅಧ್ಯಕ್ಷೆ ಹರಿಣಿ ಪುತ್ತೂರಾಯ, ವಿದ್ಯಾರ್ಥಿ ಮುಖಂಡರಾದ ಸಂದೇಶ್, ವಿಷಾಕ್, ನವನೀತ್, ಸಚಿನ್, ಧನಿಶ್ ಮೊದಲಾದವರು ಉಪಸ್ಥಿತರಿದ್ದರು.