ತುಮಕೂರು: ಶತಮಾನದ ಸಂತ, ತ್ರಿವಿಧ ದಾಸೋಹಿ ಸಿದ್ಧಗಂಗಾ ಶ್ರೀಗಳ ಅಗಲಿಕೆಗೆ ಕಂಬನಿಗಳ ಮಹಾಪೂರವೇ ಹರಿಯುತ್ತಿದೆ. ಗರ್ಭಗುಡಿಗೆ ಸೇರಿದ ನಡೆದಾಡುವ ದೇವರಿಗೆ ನಾಡಿನಾದ್ಯಂತ ಸಂತಾಪ ಸಲ್ಲಿಸಲಾಗುತ್ತಿದೆ.
ನಿನ್ನೆ ಶಿವೈಕ್ಯರಾದ ಶಿವಕುಮಾರ ಸ್ವಾಮೀಜಿ ಅವರ ಅಂತಿಮ ದರ್ಶನ ಪಡೆಯಲು ಬರುವವರಿಗಾಗಿ ಯಶವಂತಪುರದಿಂದ ನಾಲ್ಕು ಡೆಮೋ ರೈಲುಗಳ ವ್ಯವಸ್ಥೆ ಮಾಡಲಾಗಿದೆ.
ಜೊತೆ ತುಮಕೂರು ಜಿಲ್ಲೆಯಾದ್ಯಂತ ಮತ್ತು ನಗರದಲ್ಲಿ ಕೆಎಸ್‌ಆರ್‌ಟಿಸಿಯಿಂದ ಉಚಿತ ಬಸ್‌ಗಳು ಸಂಚರಿಸುತ್ತವೆ.