Recent Posts

Saturday, September 21, 2024
ಸುದ್ದಿ

ಕುಂಭ ಮೇಳ ಪ್ರಯಾಗರಾಜ 2019 ಆಂಡ್ರಾಯ್ಡ್ ಆಪ್‌ ಉದ್ಘಾಟನೆ – ಕಹಳೆ ನ್ಯೂಸ್

ಬೆಂಗಳೂರು: ಹಿಂದೂ ಜನಜಾಗೃತಿ ಸಮಿತಿಯ ‘ಕುಂಭ ಮೇಳ ಪ್ರಯಾಗರಾಜ 2019’ ಆಂಡ್ರಾಯ್ಡ್ ಆಪ್‌ಅನ್ನು ಶಂಕರಾಚಾರ್ಯ ಸ್ವಾಮಿ ಶ್ರೀ ಸ್ವರೂಪಾನಂದ ಸರಸ್ವತಿ ಮಹಾರಾಜರು ತಮ್ಮ ಕರಕಮಲಗಳಿಂದ ಉದ್ಘಾಟಿಸಿದರು.

ಪ್ರಯಾಗರಾಜ (ಕುಂಭನಗರ) – ಕುಂಭೋತ್ಸವದ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಹಿಂದಿ ಭಾಷೆಯಲ್ಲಿ ‘ಕುಂಭ ಮೇಳ ಪ್ರಯಾಗರಾಜ 2019’ (Kumbh Mela Prayagraj 2019) ಈ ಆಂಡ್ರಾಯ್ಡ್ ಆಪ್‌ಅನ್ನು ಭಕ್ತಾದಿಗಳಿಗೆ ಲಭ್ಯಗೊಳಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕುಂಭದ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಮಾಹಿತಿಯನ್ನು ನೀಡುವ ಈ ಆಪ್ ಇಂದು ಜ್ಯೋತಿಷ ಹಾಗೂ ದ್ವಾರಕಾಶಾರದಾ ಪೀಠಾಧೀಶ್ವರ ಜಗದ್ಗುರು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮಹಾರಾಜರ ಶುಭ ಕರಕಮಲಗಳಿಂದ ಲೋಕಾರ್ಪಣೆಯನ್ನು ಮಾಡಲಾಯಿತು. ಇಲ್ಲಿಯ ಶ್ರೀ ಮನಕಾಮೇಶ್ವರ ದೇವಸ್ಥಾನದಲ್ಲಿ ಈ ಲೋಕಾರ್ಪಣೆಯ ಕಾರ್ಯಕ್ರಮವು ಸಂಪನ್ನವಾಯಿತು.

ಜಾಹೀರಾತು

ಈ ಸಮಯದಲ್ಲಿ ಶಂಕರಾಚಾರ್ಯರಿಗೆ ಹಿಂದಿ ‘ಸನಾತನ ಪಂಚಾಂಗ ೨೦೧೯’ಅನ್ನು ಉಡುಗೊರೆಯಾಗಿ ನೀಡಲಾಯಿತು. ಶಂಕರಾಚಾರ್ಯರು ತಮ್ಮ ಆಶೀರ್ವಚನದಲ್ಲಿ, ‘ನಿಮ್ಮದು ತುಂಬಾ ಒಳ್ಳೆಯ ಕಾರ್ಯವಿದೆ. ಸನಾತನ ಯಾರೆಂದರೆ ಅದು ಈಶ್ವರನಾಗಿದ್ದಾನೆ. ಸ್ಮೃತಿ ಮತ್ತು ಪುರಾಣಗಳಲ್ಲಿ ನೀಡಲಾದ ಈಶ್ವರನ ಜ್ಞಾನವೂ ಸನಾತನವಾಗಿದೆ. ಶಾಸ್ತ್ರದಲ್ಲಿ ಹೇಳಿದಂತೆ ಕರ್ತವ್ಯಗಳನ್ನು ಮಾಡುವುದೂ ಸನಾತನವಾಗಿದೆ. ಅದನ್ನು ಮರೆಯಬಾರದು.

ಸನಾತನ ಧರ್ಮದ ಆಚರಣೆಯಿಂದಲೇ ಸಮಾಜದಲ್ಲಿ ಪರಿವರ್ತನೆಯಾಗುವುದು’, ಎಂದು ಹೇಳಿದರು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ ಹಾಗೂ ಉತ್ತರ ಪ್ರದೇಶ ಹಾಗೂ ಬಿಹಾರಿನ ಸಮನ್ವಯಕರಾದ ಶ್ರೀ. ವಿಶ್ವನಾಥ ಕುಲಕರ್ಣಿ ಉಪಸ್ಥಿತರಿದ್ದರು.

ಎಲ್ಲ ಭಕ್ತಾದಿಗಳು ಈ ಆಂಡ್ರೈಡ್ ಆಪನ್ನು ಗೂಗಲ್ ಪ್ಲೇ-ಸ್ಟೋರ್‌ನಿಂದ ಡೌನಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಲಿಂಕ್: https://play.google.com/store/apps/details?id=hjs.android.kumbh ಭೇಟಿಕೊಡಿ.

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಿರ್ಮಿಸಲಾದ ಈ ಆಂಡ್ರಾಯ್ಡ್ ಆಪ್‌ನ ವೈಶಿಷ್ಟ್ಯಗಳು

೧. ಕುಂಭಮೇಳದ ಸವಿಸ್ತಾರ ಮಾಹಿತಿ ಹಾಗೂ ವಾರ್ತೆ
೨. ರಾಜಯೋಗಿ(ಶಾಹಿ) ಸ್ನಾನದ ತಿಥಿಗಳು ಹಾಗೂ ಪ್ರಯಾಗರಾಜಕ್ಕೆ ತಲುಪುವ ಮಾಹಿತಿ
೩. ಪ್ರಯಾಗ, ಹರಿದ್ವಾರ, ಉಜ್ಜೈನ್ ಹಾಗೂ ನಾಸಿಕ ಇತ್ಯಾದಿ ಕುಂಬೋತ್ಸವ ಕ್ಷೇತ್ರದ ಪೌರಾಣಿಕ ಹಾಗೂ ಧಾರ್ಮಿಕ ಮಹತ್ವ
೪. ದೇವಸ್ಥಾನ ದರ್ಶನ, ಹಿಂದೂ ದೇವಿ-ದೇವತೆಗಳು, ವೇಷಭೂಷಣ, ಆದರ್ಶ ದಿನಚರಿ, ಶ್ರಾದ್ಧಕರ್ಮ ಇತ್ಯಾದಿ ವಿಷಯಗಳ ಬಗ್ಗೆ ಧರ್ಮಶಿಕ್ಷಣ
೫. ಪ್ರಯಾಗರಾಜಕ್ಕೆ ಬರುವ ಭಕ್ತರ ಸೌಕರ್ಯಕ್ಕಾಗಿ ಹೋಟೆಲ್, ರೆಸ್ಟೊರೆಂಟ್, ಎಟಿಎಮ್, ಚಿಕಿತ್ಸಾಲಯ ಮಾಹಿತಿ
೬. ಹಿಂದೂ ಜನಜಾಗೃತಿ ಸಮಿತಿ ಹಾಗೂ ಸನಾತನ ಸಂಸ್ಥೆಯ ವತಿಯಿಂದ ಕುಂಭದಲ್ಲಿ ರಾಷ್ಟ್ರ ಹಾಗೂ ಧರ್ಮದ ವಿಷಯದಲ್ಲಿ ಹಾಕಲಾಗಿದ್ದ ಪ್ರದರ್ಶನಗಳು
೭. ‘ಹಿಂದೂ ರಾಷ್ಟ್ರದ ಆವಶ್ಯಕತೆ’ಯ ಮಾಹಿತಿ