Thursday, January 23, 2025
ಸುದ್ದಿ

ಕೇರಳ ಹೋಟೆಲ್ ಮತ್ತು ರೆಸ್ಟೊರೆಂಟ್‌ನ ರಾಜ್ಯ ಸಮ್ಮೇಳನ ಪ್ರಚರಣಾದಂಗವಾಗಿ ವಾಹನ ಪ್ರಚರಣಾ ಜಾಥಾ – ಕಹಳೆ ನ್ಯೂಸ್

ಮಂಜೇಶ್ವರ: ಕೇರಳ ಹೋಟೆಲ್ ಮತ್ತು ರೆಸ್ಟೊರೆಂಟ್ ಇದರ 54 ನೇ ರಾಜ್ಯ ಸಮ್ಮೇಳನ ಕ್ಯಾಲಿಕೆಟ್‌ನಲ್ಲಿ ಈ ತಿಂಗಳ 25 ರಿಂದ ಮೊದಲ್ಗೊಂಡು 29 ರವರೆಗೆ ನಡೆಯಲಿದ್ದು ಕಾರ್ಯಕ್ರಮದ ಪ್ರಚರಣಾದಂಗವಾಗಿ ವಾಹನ ಪ್ರಚರಣಾ ಜಾಥಾ ಹೊಸಂಗಡಿಯಲ್ಲಿ ಕೇರಳ ಹೋಟೆಲ್ ಮತ್ತು ರೆಸ್ಟೊಂರೆಂಟ್ ಮಂಜೇಶ್ವರ ಯೂನಿಟ್ ವತಿಯಿಂದ ನಡೆಯಿತು.

ಜಾಥಾದ ಅಧ್ಯಕ್ಷತೆಯನ್ನು ಮಂಜೇಶ್ವರ ಯೂನಿಟ್ ಅಧ್ಯಕ್ಷ ಮಾಧವ ಸ್ವಾಗತ್ ಹೋಟೆಲ್ ಕುಂಜತ್ತೂರು ವಹಿಸಿದರು. ಕಾರ್ಯಕ್ರಮವನ್ನು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಮಂಜೇಶ್ವರ ಘಟಕದ ಅಧ್ಯಕ್ಷ ಬಶೀರ್ ಕನಿಲ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯ ಕಾರ್ಯದರ್ಶಿ ಬಿಜುಲಾಲ್ ಪ್ರಧಾನ ಭಾಷಣ ಮಾಡಿದರು. ರಾಜ್ಯ ಸಮಿತಿ ಉಪಾಧ್ಯಕ್ಷ ಪಿ.ಸಿ. ಬಾವ, ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹ್‌ಮನ್ ಮೊದಲಾದವರು ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಉಪ್ಪಳ ಯೂನಿಟ್ ಅಧ್ಯಕ್ಷ ಜಯರಾಮ ಶೆಟ್ಟಿ ಕಡಂಬಾರ್ ಕೋಶಾಧಿಕಾರಿ ಶ್ರೀಧರ ಉಪ್ಪಳ, ಮಂಜೇಶ್ವರ ಯೂನಿಟ್ ಕೋಶಾಧಿಕಾರಿ ಶೇಖರ ಸಂಗಂ ಹೋಟೆಲ್, ಕುಸುಮ ಪಾವೂರು, ಸತ್ಯ ದರ್ಶನ ಹೊಸಂಗಡಿ, ಮೊದಲಾದವರು ಉಪಸ್ಥಿತರಿದ್ದರು.

ಉಪ್ಪಳ ಯೂನಿಟ್‌ನ ಕಾರ್ಯದರ್ಶಿ ಅಂiÀುುಬ್ ಸ್ವಾಗತಿಸಿ, ಮಂಜೇಶ್ವರ ಯೂನಿಟ್‌ನ ಕಾರ್ಯದರ್ಶಿ ಬಿಲಾಲ್ ಮೊಹಮ್ಮದ್ ವಂದಿಸಿದರು. ಬೆಳಿಗ್ಗೆ ಜಾಥಾವು ಕಾಸರಗೋಡು ಜಿಲ್ಲೆಯ ತ್ರಿಕ್ಕರಿಪುರದಿಂದ ವಿವಿಧ ಕೇಂದ್ರಗಳ ಮೂಲಕ ಸಾಗಿ ಸಂಜೆ ವೇಳೆ ಹೊಸಂಗಡಿ ತಲುಪಿದ್ದು ಬಳಿಕ ಜಾಥವು ಕಾಸರಗೋಡಿಗೆ ತೆರಳಿ ಸಂಪನ್ನಗೊಂಡಿತು.