Thursday, January 23, 2025
ಸುದ್ದಿ

ಧರ್ಮಗಳು ಆಚಾರಗಳನ್ನು ನಿಷ್ಟೆಯಿಂದ ಆಚರಿಸುವುದರ ಮೂಲಕ ನೆಲೆ ನಿಲ್ಲುವುದು: ಹರೀಶ ಸುಲಾಯ – ಕಹಳೆ ನ್ಯೂಸ್

ಮಂಜೇಶ್ವರ: ಯಾವುದೇ ಧರ್ಮಗಳು ಅವುಗಳು ಒಳಗೊಂಡಿರುವ ಆಚಾರಗಳನ್ನು ನಿಷ್ಟೆಯಿಂದ ಆಚರಿಸುವುದರ ಮೂಲಕ ನೆಲೆ ನಿಲ್ಲುವುದು ಮತ್ತು ಆ ಕೆಲಸ ಹಿಂದೂ ಧರ್ಮದಲ್ಲಿ ನಡೆಯಬೇಕಿದೆ.

ನಾವು ಮತ ಸಹಿಷ್ಣುತೆ ಉಳ್ಳವರು ಆದ್ದರಿಂದಲೇ ಎಲ್ಲಾ ಧರ್ಮಗಳನ್ನು ಗೌರವಿಸುತ್ತೇವೆ ಆದರೆ ಕೆಲವು ಕಿಡಿಗೇಡಿಗಳಿಂದಾಗಿ ಕೋಮು ಸೌಹಾರ್ದಕ್ಕೆ ದಕ್ಕೆಯುಂಟಾಗುತ್ತದೆ ಎಂದು ಸಾಹಿತಿ ಶಿಕ್ಷಕ ಹರೀಶ ಸುಲಾಯ ಒಡಂಬೆಟ್ಟು ಅವರು ಮಂಗಲ್ಪಾಡಿ ಶ್ರೀ ಕೃಷ್ಣ ಭಜನಾ ಮಂದಿರದಲ್ಲಿ ನಡೆದ ವಾರ್ಷಿಕೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಸಭೆಯಲ್ಲಿ ಒಡಿಯೂರಿನ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮಿಯವರು ಅಶೀರ್ವಚನ ನೀಡಿದರು ಮತ್ತು ಬದಿಯಡ್ಕ ವಸಂತ ಪೈಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ನಿವೃತ್ತ ಅಧ್ಯಾಪಕ ಶ್ರೀ ಶಶಿಕಾಂತ್ ಮತ್ತು ಶ್ರೀ ಭಾಸ್ಕರ ಕೊಂಡೆವೂರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು