Wednesday, January 22, 2025
ಸುದ್ದಿ

Big Breaking News – ಶಬರಿಮಲೆ ಪ್ರವೇಶಿಸಿದ ಕನಕದುರ್ಗರನ್ನು ಮನೆಯಿಂದಲೇ ಹೊರದಬ್ಬಿದ ಕುಟುಂಬ ಸದಸ್ಯರು – ಕಹಳೆ ನ್ಯೂಸ್

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ದೇವಾಲಯವನ್ನು ಪ್ರವೇಶಿಸಿದ್ದ ಹಿನ್ನೆಲೆ ಕನಕದುರ್ಗ ಅವರನ್ನು ಕುಟುಂಬ ಸದಸ್ಯರು ಮನೆಯಿಂದಲೇ ಈಗ ಹೊರದಬ್ಬಿದ್ದಾರೆ. 

ಅತ್ತೆಯಿಂದ ಹಲ್ಲೆಗೆ ಒಳಗಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಕುಟುಂಬ ಸದಸ್ಯರು ಮನೆ ಪ್ರವೇಶಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಈಗ ಕನಕದುರ್ಗ ಸರ್ಕಾರದ ವಸತಿ ನಿಲಯದಲ್ಲಿ ಆಶ್ರಯ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡಿಸೆಂಬರ್ 22 ರಂದು ತಿರುವನಂತಪುರಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳುತ್ತೇನೆ ಎಂದು ಕನಕದುರ್ಗ ಸುಳ್ಳು ಹೇಳಿ ದೇವಾಲಯವನ್ನು ಪ್ರವೇಶಿಸಿದ್ದರು. ಭಕ್ತರ ವಿರೋಧದ ಮಧ್ಯೆ ದೇವಾಲಯವನ್ನು ಪ್ರವೇಶಿಸಿದ್ದಕ್ಕೆ ಕೋಪಗೊಂಡಿರುವ ಅತ್ತೆ ಮತ್ತು ಮಾವ ಕನಕ ದುರ್ಗ ಅವರಿಗೆ ಮನೆಯ ಪ್ರವೇಶವನ್ನು ನಿರಾಕರಿಸಿ ಹೊರದಬ್ಬಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಯ್ಯಪ್ಪ ದೇವಾಲಯದ ಸಂಪ್ರದಾಯವನ್ನು ಮುರಿದಿದ್ದಕ್ಕೆ ಕನಕದುರ್ಗ ಸಾರ್ವಜನಿಕವಾಗಿ ಹಿಂದೂ ಸಮುದಾಯದ ಕ್ಷಮೆ ಕೇಳದ ಹೊರತು ಆಕೆಯನ್ನು ಮನೆಗೆ ಸೇರಿಸಿಕೊಳ್ಳುವುದಿಲ್ಲ ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

44 ವರ್ಷದ ಬಿಂದು ತಲಶೇರಿಯಲ್ಲಿ ಕಾಲೇಜು ಉಪನ್ಯಾಸಕಿ ಮತ್ತು ಸಿಪಿಐ(ಎಂ) ಕಾರ್ಯಕರ್ತೆಯಾಗಿದ್ದು, ಕನಕದುರ್ಗ ನಾಗರಿಕ ಸರಬರಾಜು ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ.