Wednesday, January 22, 2025
ಸುದ್ದಿ

ಪ್ರತಿಫಲದ ಕುರಿತು ಅನಾಸಕ್ತಿಯಿಂದ ಕರ್ಮವನ್ನು ಮಾಡಬೇಕು: ಡಾ.ವಿಜಯ ಸರಸ್ವತಿ – ಕಹಳೆ ನ್ಯೂಸ್

ಪುತ್ತೂರು: ಭಗವದ್ಗೀತೆಯ ಪಾರಾಯಣವನ್ನು ವಿದ್ಯಾಸಂಸ್ಥೆಗಳಲ್ಲಿ ಮಾಡುವುದರಿಂದ ದೈನಂದಿನ ಅಧ್ಯಯನದ ಜೊತೆಗೆ ಜೀವನ ಪಾಠ ದೊರಕುವುದಕ್ಕೆ ಸಾಧ್ಯ. ಸಾಮೂಹಿಕ ಗೀತಾ ಪಾರಾಯಣದಿಂದ ಆಧ್ಯಾತ್ಮಿಕ ವಾತಾವರಣ ಸೃಷ್ಟಿಯಾಗುತ್ತದೆ. ಜೀವನ ಮೌಲ್ಯದ ಅರಿವಿಗೆ ಗೀತೆಯು ಸಹಕಾರಿಯಾಗಿದೆ. ಎಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಿಭಾಗಗಳ ಸಂಯೋಜಕಿ ಡಾ. ವಿಜಯಸರಸ್ವತಿ ಹೇಳಿದರು.

ಅವರು ಕಾಲೇಜಿನ ವಿಕಾಸಂ ಸಂಸ್ಕೃತ ಸಂಘ ಮತ್ತು ಐಕ್ಯೂಎಸಿ ಘಟಕದ ಸಹಯೋಗದಲ್ಲಿ ಆಯೋಜನೆಗೊಂಡ ಶ್ರೀಮದ್ ಭಗವದ್ಗೀತಾ ಭಗವದರ್ಪಣ ಸಮಾರಂಭದಲ್ಲಿ ಅತಿಥಿಯಾಗಿ ಆಗಮಿಸಿ ಸೋಮವಾರ ಮಾತನಾಡಿದರು.
ಎಲ್ಲಿ ಸಮಸ್ಯೆಗಳು ಇವಯೋ ಅಲ್ಲಿ ಒಂದು ಹೊಸ ಅಧ್ಯಾಯ ಆರಂಭವಾಗುತ್ತದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಗದ್ಗೀತೆಯು ಹುಟ್ಟಿಕೊಂಡಿರುವುದು ಪ್ರಶ್ನೆಗಳಿಂದ. ಅದೇ ರೀತಿ ಪ್ರತಿಯೊಂದು ಪ್ರಶ್ನೆಗಳಿಗೂ ಉತ್ತರವನ್ನು ಗೀತೆ ನೀಡುತ್ತದೆ. ನಾನು ಅನ್ನುವುದು ಏನೂ ಅಲ್ಲ, ಭಗವಂತನೇ ಎಲ್ಲಾ ಎಂಬ ಸಮರ್ಪಣ ಭಾವ ಗೀತೆಯಲ್ಲಿ ಅಡಕವಾಗಿದೆ ಎಂದರಲ್ಲದೇ ಪ್ರತಿಫಲದ ಕುರಿತು ಅನಾಸಕ್ತಿಯಿಂದ ಕರ್ಮವನ್ನು ಮಾಡಬೇಕು ಎಂಬ ಸಂದೇಶವನ್ನು ಗೀತೆ ಸಾರುತ್ತದೆ ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಭಕ್ತಿಯೋಗದಲ್ಲಿ ಸ್ತುತಿಸುವುದರ ಮೂಲಕ ದೇವರ ಸಾಮಿಪ್ಯಕ್ಕೆ ಅಡಿಯಿಡುತ್ತೇವೆ. ನಾವು ಪಡೆದ ಫಲವನ್ನು ಸುತ್ತಲಿನ ಜನರಿಗೂ ಹಂಚಿದಾಗ ಮುಕ್ತಿ ದೊರಕಲು ಸಾಧ್ಯ. ಕಂಬಳಿ ಹುಳ ಚಿಟ್ಟೆಯಾಗಿ ಮಾರ್ಪಾಡಾಗುತ್ತದೆ, ನಂತರ ತನ್ನ ಪುಟ್ಟ ಜೀವಿತಾವಧಿಯಲ್ಲಿ ವೀಕ್ಷಕರಿಗೆ ಮುದನೀಡುವ ಕೆಲಸ ಮಾಡುತ್ತದೆ. ಅದೇ ರೀತಿ ಮಾನವನು ಜೀವನವನ್ನು ಸಂಪೂರ್ಣವಾಗಿ ಸಾರ್ಥಕಗೊಳಿಸಬೇಕು ಎಂದು ನುಡಿದರು.

ಸಂಸ್ಕೃತ ಸಂಘದ ಸಂಯೋಜಕ ಡಾ.ಶ್ರೀಶ ಕುಮಾರ ಪ್ರಸ್ತಾವಿಸಿದರು. ವಿದ್ಯಾರ್ಥಿನಿ ಶರಣ್ಯ ಸ್ವಾಗತಿಸಿ, ವಂದಿಸಿದರು. ವೇದಿಕೆಯಲ್ಲಿ ಸಂಘದ ಅಧ್ಯಕ್ಷೆ ಕವ್ಯಾರತ್ನ ಕಾರ್ಯದರ್ಶಿ ನವನೀತ್ ಉಪಸ್ಥಿತರಿದ್ದರು.