ಮಂಗಳೂರು: ಕರಾವಳಿಯ ಪ್ರಮುಖ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿರುವ ಕದ್ರಿ ಮಂಜುನಾಥ ಸ್ವಾಮಿಯ ಸಾನಿಧ್ಯದಲ್ಲಿ ಜಾತ್ರಾ ಮಹೋತ್ಸವ ಸಡಗರದಿಂದ ನಡೆಯುತ್ತಿದೆ. ಲಕ್ಷಾಂತರ ಭಕ್ತರ ಅರಾಧ್ಯ ದೇವರಾದ ಮಂಜುನಾಥ ಸ್ವಾಮಿ ನಗರದ ನಾನಾ ಬೀದಿಗಳಲ್ಲಿ ಹಾಗೂ ಸಾರ್ವಜನಿಕ ಕಟ್ಟೆಗಳಲ್ಲಿ ಸಂಚರಿಸಿ ಭಕ್ತರಿಂದ ಪೂಜಿಸಿಕೊಂಡ ಬಳಿಕ ಇಂದು ದೇವರ ವೈಭವದ ರಥೋತ್ಸವ ನಡೆಯಿತು.
ಈ ಅಪೂರ್ವ ಕ್ಷಣವನ್ನು ಕಣ್ತುಂಬಿಕೊಳ್ಳಲು ನಾನಾ ಊರಿನಿಂದ ಭಕ್ತರು ಅಗಮಿಸಿದರು. ವೈಭವಪೂರಿತವಾಗಿ ನಡೆದ ರಥೋತ್ಸವದಲ್ಲಿ ಲಕ್ಷಾಂತರ ಮಂದಿ ಭಕ್ತರು ಭಾಗಿಯಾದರು.