ಅಕ್ಷರಲಕ್ಷಂ ಸಾಕ್ಷರತೆ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದ 97 ರ ಹರೆಯದ ಕಾರ್ತಿಯಾನಿ ಅಮ್ಮನನ್ನು ಗೌರವಿಸಿದ ಕಾಮನ್ವೆಲ್ತ್ ಆಫ್ ಲರ್ನಿಂಗ್ – ಕಹಳೆ ನ್ಯೂಸ್
ಹೊಸದಿಲ್ಲಿ: ಕಳೆದ ವರ್ಷ ಕೇರಳ ಸರಕಾರ ನಡೆಸಿದ್ದ ಅಕ್ಷರಲಕ್ಷಂ ಸಾಕ್ಷರತೆ ಪರೀಕ್ಷೆಯಲ್ಲಿ ಮೊದಲ ರ‍್ಯಾಂಕ್ ಪಡೆದಿರುವ 97 ರ ಹರೆಯದ ಕಾರ್ತಿಯಾನಿ ಅಮ್ಮಾ ಅವರನ್ನು ಕಾಮನ್ವೆಲ್ತ್ ಆಫ್ ಲರ್ನಿಂಗ್ ಗೌರವಿಸಿದೆ.
ಕಾಮನ್ವೆಲ್ತ್ ದೇಶಗಳಲ್ಲಿ ಶಿಕ್ಷಣದ ಅಭಿವೃದ್ದಿಗೆ ಶ್ರಮಿಸುತ್ತಿರುವ ಕೆನಡಾ ಮೂಲದ ಈ ಸಂಘಟನೆಯು ಕಾರ್ತಿಯಾನಿ ಅವರನ್ನು ತನ್ನ ಸದ್ಬಾವನಾ ರಾಯಭಾರಿ ಎಂದು ಘೋಷಿಸಿದೆ.
ಕಾಮನ್ ವೆಲ್ತ್ ಆಫ್ ಲರ್ನಿಂಗ್ ಗುಡ್ವಿಲ್ ಉಪಾಧ್ಯಕ್ಷ ಬಾಲಸುಬ್ರಹ್ಮಣ್ಯಂ ಅವರು ಕಾರ್ತಿಯಾನಿ ಅಮ್ಮ ಅವರನ್ನು ಖುದ್ದಾಗಿ ಭೇಟಿಯಾಗಿ ಪ್ರಶಸ್ತಿಯನ್ನು ಹಸ್ತಾಂತರಿಸಿದರು.