Monday, January 20, 2025
ಸುದ್ದಿ

ಶತಮಾನೋತ್ಸವ ಸಂಭ್ರಮಕ್ಕೆ ಸಿದ್ಧಗೊಂಡಿದೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ – ಕಹಳೆ ನ್ಯೂಸ್

ಸುಳ್ಯ: ಶತಮಾನೋತ್ಸವ ಸಂಭ್ರಮಕ್ಕೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ. ಇಂದು ಈ ಕಾರ್ಯಕ್ರಮ ಎಸ್.ಎನ್ ಮನ್ಮಥರ ಸಾರಥ್ಯದಲ್ಲಿ ಶತಕ ಸಂಭ್ರಮವನ್ನು ಸವಿಯಲು ಸಕಲ ಸಿದ್ಧತೆಗಳಿಂದ ಸಜ್ಜುಗೊಂಡಿದೆ.

ಈ ಶತಮಾನೋತ್ಸವದ ಉದ್ಘಾಟನಾ ಕಾರ್ಯಕ್ರಮವನ್ನು ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ನರವೇರಿಸಲಿದ್ದಾರೆ. ತದನಂತರ ಸಭಾ ಕಾರ್ಯಕ್ರಮ ನಡೆಯಲಿದ್ದು, ದ.ಕ.ಜಿ.ಕೇ.ಸ.ಬ್ಯಾಂಕ್‌ನ ಅಧ್ಯಕ್ಷ ಸಹಕಾರ ರತ್ನ, ಡಾ. ಎಂ.ಎನ್ ರಾಜೇಂದ್ರ ಕುಮಾರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಶಾಸಕ ಎಸ್ ಅಂಗಾರ ವಹಿಸಲಿದ್ದಾರೆ. ಸ್ಮರಣ ಸಂಚಿಕೆ ಬಿಡುಗಡೆಯನ್ನು ಉಸ್ತುವಾರಿ ಸಚಿವ ಯುಟಿ ಖಾದರ್ ಹಾಗೂ ವಿಶೇಷ ಅಭ್ಯಾಗತರಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸಹಕಾರಿ ಯೂನಿಯನ್ ಬ್ಯಾಂಕ್‌ನ ಅಧ್ಯಕ್ಷ ಹರೀಶ್ ಆಚಾರ್ಯ ಮತ್ತು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ವಹಿಸಲಿದ್ದಾರೆ.

ಇನ್ನು ಗೌರವ ಉಪಸ್ಥಿತಿಯಲ್ಲಿ ಅನೇಕ ಗಣ್ಯಾತಿ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಂಜೆ ಪ್ರಮೋದ್ ರೈ ಬೆಳ್ಳಾರೆ ಇವರ ಸಾರಥ್ಯದಲ್ಲಿ ‘ಝೇಂಕಾರ ನಾಟ್ಯದೊಡಲು ನಗೆಕಡಲು’ ಎಂಬ ವಿಶೇಷ ಸಾಂಸ್ಕೃತಿಕ ನಡೆಯಲಿದೆ.