ನಡೆದಾಡುವ ದೇವರು, ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಭೈರ ಹೆಸರಿನ ಶ್ವಾನ ನಾಪತ್ತೆಯಾಗಿದೆ.
ಸಿದ್ದಗಂಗಾ ಸ್ವಾಮೀಜಿಯವರಿಗೆ ಪ್ರಾಣಿಗಳೆಂದರೆ ಅಚ್ಚುಮೆಚ್ಚು. ಅದೇ ರೀತಿ ಭೈರ ಹೆಸರಿನ ಶ್ವಾನ ಅವರನ್ನು ಅತಿಯಾಗಿ ಹಚ್ಚಿಕೊಂಡಿತ್ತು. ಶ್ರೀಗಳು ಮಠದ ಹೊರಗೆ ಓಡಾಡುವಾಗ, ಭೈರ ಕೂಡ ಅವರನ್ನು ಹಿಂಬಾಲಿಸುತ್ತಿತ್ತು.
ಇತ್ತೀಚೆಗೆ ಅನಾರೋಗ್ಯದ ಕಾರಣ ಶ್ರೀಗಳು ಆಸ್ಪತ್ರೆಗೆ ದಾಖಲಾಗಿದ್ದ ಸಂದರ್ಭದಲ್ಲಿ, ಭೈರ ಶ್ವಾನದ ಕುರಿತಾಗಿ ವಿಚಾರಿಸುತ್ತಿದ್ದರು ಎನ್ನಲಾಗಿದೆ.
ಶ್ರೀಗಳು ಕಾಣದಿದ್ದಾಗ ಅವರು ಭಕ್ತರಿಗೆ ದರ್ಶನ ನೀಡುತ್ತಿದ್ದ ಸ್ಥಳದಲ್ಲಿ ಭೈರ ಬಹುಹೊತ್ತಿನವರೆಗೂ ಕಾಯುತ್ತಿತ್ತು. ಶ್ರೀಗಳು ಮಠಕ್ಕೆ ವಾಪಸಾದ ಬಳಿಕ ಭೈರ ನೀರು, ಆಹಾರವನ್ನು ತ್ಯಜಿಸಿ ಅಳುತ್ತಾ ಊಳಿಡಲಾರಂಭಿಸಿತ್ತು.
ಶ್ರೀಗಳು ಲಿಂಗೈಕ್ಯರಾಗುವ 3 ದಿನಗಳ ಹಿಂದೆಯೇ ಭೈರ ಏನೂ ತಿಂದಿರಲಿಲ್ಲ ಎಂದು ಹೇಳಲಾಗಿದೆ. ಮಠದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಭೈರ, ಶ್ರೀಗಳು ಲಿಂಗೈಕ್ಯರಾದ ಬಳಿಕ ನಾಪತ್ತೆಯಾಗಿದ್ದು, ಮಠದ ಭಕ್ತರಲ್ಲಿ ಅಚ್ಚರಿ ಮೂಡಿಸಿದೆ ಎನ್ನಲಾಗಿದೆ.