ಮಂಗಳೂರು: ಪಚ್ಚನಾಡಿ ಡಂಪಿಂಗ್ ಯಾರ್ಡ್‍ನಲ್ಲಿ ಭಾರೀ ಬೆಂಕಿ ದುರಂತ ಸಂಭವಿಸಿ ತ್ಯಾಜ್ಯ, ತಿಪ್ಪೆ ಹೊತ್ತಿ ಉರಿದ ಘಟನೆ ನಿನ್ನರ ಮಧಾಹ್ನ ನಡೆದಿದೆ.
ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ತರಿತಗತಿಯಲ್ಲಿ ಕಾರ್ಯಾಚರಣೆ ಆರಂಭಿಸಿದ್ದರೂ ಇಂದು ಮುಂಜಾನೆ ನಿಯಂತ್ರಣಕ್ಕೆ ಬಂದಿದೆ .
ಸುಮಾರು 2 ಗಂಟೆಗೆ ಪಚ್ಚನಾಡಿ ಡಂಪಿಂಗ್ ಯಾರ್ಡ್ನ ಎಡ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಸಂಜೆಯಾಗುತಿದ್ದಂತೆ ತೀವ್ರತೆಯನ್ನು ಪಡೆದು ಬೆಂಕಿಯ ಕೆನ್ನಾಲಿಗೆ ಆಕಾಶದೆತ್ತರ ಹಬ್ಬಿತು. ಎಲ್ಲೆಡೆ ದಟ್ಟ ಹೊಗೆ ಕಾಣಿಸಿ ಸುತ್ತಮುತ್ತಲು ಕೆಟ್ಟ ವಾಸನೆ ಬೀರಲಾರಂಭಿಸಿತು.
ಅಗ್ನಿಶಾಮಕದಳದ ಸಿಬ್ಬಂದಿ ನಾಲೈದು ನೀರಿನ ಯಂತ್ರಗಳ ಸಹಿತ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಸಂಜೆಯವರೆಗೂ ಬೆಂಕಿ ನಿಯಂತ್ರಣಕ್ಕೆ ಬಾರದ ಕಾರಣ ಖಾಸಗಿ ನೀರಿನ ಟ್ಯಾಂಕರುಗಳೂ ಬೆಂಕಿ ನಂದಿಸುವ ಕೆಲಸವನ್ನು ಮುಂದುವರಿಸಿದ್ದವು. ಇಂದು ಮುಂಜಾನೆ ಬೆಂಕಿ ನಂಚದಿಸಲಾಗಿದ್ದು ಯಾರ್ಡ್ ತುಂಬಾ ದಟ್ಟ ಹೊಗೆ ಆವರಿಸಿದೆ.