Monday, January 20, 2025
ಸುದ್ದಿ

ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಆಂದೋಲ ಶ್ರೀ ಬಂಧನ | ಬಿಡುಗಡೆಗೊಳಿಸಿದ್ದರೆ, ರಾಜ್ಯದ ಎಲ್ಲಾ ಸಂತರೂ ಬೀದಿಗಿಳಿದು ಹೋರಾಟ ನಡೆಸುತ್ತೇವೆ – ವಜ್ರದೇಹಿ ಶ್ರೀ ಎಚ್ಚರಿಕೆ.

ಮಂಗಳೂರು : ರಾಜ್ಯದಲ್ಲಿ ಸಾಲು ಸಾಲು ಹಿಂದೂ ಕಾರ್ಯಕರ್ತರ ಹತ್ಯೆ, ಹಿಂದೂ ಸಂತರ ದಮನ ನಿರಂತರವಾಗಿ ಎಗ್ಗಿಲ್ಲದೆ ನಡೆಯುತ್ತಿದೆ. ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಆಂದೋಲಾ ಗ್ರಾಮದ ಕರುಣಾ ಮಠದ ಪರಮಪೂಜ್ಯ ಸ್ವಾಮಿಜೀಗಳು ಹಾಗು ಶ್ರೀರಾಮಸೇನೆಯ ಕಾರ್ಯಧ್ಯಕ್ಷರಾಗಿರುವ ಶ್ರೀ.ಸಿದ್ಧಲಿಂಗ ಸ್ವಾಮೀಜೀಗಳ ಬಂಧನ ಮಾಡಿಸಿದ ರಾಜ್ಯದ ಹಿಂದೂ ವಿರೋಧಿ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ.

ಬಂಧನಕ್ಕೆ ಕಾರಣ :

ಜಾಹೀರಾತು
ಜಾಹೀರಾತು
ಜಾಹೀರಾತು

ಆಂದೋಲ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಕೇವಲ ಹಿಂದೂ ಅಂಗಡಿಗಳನ್ನ ತೆರವುಗೊಳಿಸಿ ಮುಸ್ಲಿಂ ಅಂಗಡಿಯನ್ನ ತೆರವುಗೊಳಿಸದೆ ಬಿಟ್ಟಿದ್ದರಿಂದ ಗ್ರಾಮಸ್ಥರು ಆಕ್ಷೇಪವ್ಯಕ್ತಪಡಿಸಿದ್ದರು.
ತಮ್ಮ ಅಂಗಡಿಗಳನ್ನ ತೆರವುಗೊಳಿಸೋಕೆ ಒತ್ತಾಯ ಮಾಡೋಕೆ ಇವರ್ಯಾರು ಅಂತ ಆಂದೋಲಾ ಗ್ರಾಮದ ಮುಸಲ್ಮಾನರು ಗ್ರಾಮದ ಹಿಂದುಗಳ ಮೇಲೆ ಆಕ್ರಮಣ ಕೂಡ ಮಾಡಿದ್ದರು. ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಎರಡೂ ಕೋಮಿನ ಜನರು ಹಲ್ಲೆಗೊಳಗಾಗಿ ಆಸ್ಪತ್ರೆ ಸೇರಿದ್ದರು. ಇದಾದನಂತರ ಕಲಬುರಗಿ ಜಿಲ್ಲೆಯ MIM ಪಕ್ಷ ಭಯೋತ್ಪಾದಕ ಸಂಘಟನೆಗಳಾದ PFI, SDPI ಸಂಘಟನೆಗಳ ಜೊತೆಗೂಡಿ ಪ್ರಕರಣಕ್ಕೆ ಸಂಬಂಧವೇ ಇರದ ಆಂದೋಲಾ ಕರುಣಾ ಮಠದ ಸ್ವಾಮೀಜೀಗಳಾದ ಶ್ರಿ.ಸಿದ್ಧಲಿಂಗಸ್ವಾಮೀಜೀಗಳ ಬಂಧನಕ್ಕೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಒತ್ತಾಯಿಸಿದ್ದರು.

ವಜ್ರದೇಹಿ ಶ್ರೀ ಖಂಡನೆ :
ಅನ್ಯಾಯದ ವಿರುದ್ಧ ಧ್ವನಿ ಎತ್ತುವವನ್ನು ಬಂಧಿಸುವ ದುಷ್ಟ ಸರಕಾರಕ್ಕೆ ಧಿಕ್ಕಾರವಿರಲಿ, ಹಿಂದೂ ಸಮಾಜ ಯಾವತ್ತೂ ಇಂತಹ ಅನ್ಯಾಯವನ್ನು ಸಹಿಸುವುದಿಲ್ಲ, ಸಂತರನ್ನು ಬಂಧಿಸಿ ಧರ್ಪ ತೋರಿಸುವ ಬದಲು ಆರೋಪ ಸಾಭಿತಾಗಿರುವ ಜಾರ್ಜ್ ನ್ನು ಬಂಧಿಸಿ. ತಕ್ಷಣ ಸ್ವಾಮೀಜಿಯವರನ್ನು ಬಿಡುಗಡೆಗೊಳಿಸಿ ಕ್ಷಮೆಯಾಚಿಸದಿದ್ದರೆ ರಾಜ್ಯದ ಎಲ್ಲಾ ಸಂತರು ಒಗ್ಗೂಡಿ ಬೀದಿಗೆ ಇಳಿಯುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Leave a Response