Monday, January 20, 2025
ಸುದ್ದಿ

” ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ” ಹಾಡಿನ ವಿಡಿಯೋ ಆಲ್ಬಮ್ ಇಂದು ಮಂಗಳೂರು ಪುರಭವನದಲ್ಲಿ ಲೋಕಾರ್ಪಣೆ | ಶಾಂತ ಕುಂಟಿನಿ ನಿರ್ಮಾಣ & ಸಾಹಿತ್ಯ, ಜಗದೀಶ್ ಪುತ್ತೂರು ಕಂಠಸಿರಿ !

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ವತಿಯಿಂದ ಇಂದು ಅಪರಾಹ್ನ ಮೂರು ಘಂಟೆಗೆ ಮಂಗಳೂರಿನ ಪುರಭವನದಲ್ಲಿ ನಡೆಯುವ ಜಿಲ್ಲಾ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕವಯತ್ರಿ ಶಾಂತ ಕುಂಟಿನಿಯವರ ನಿರ್ಮಾಣ ಮತ್ತು ಸಾಹಿತ್ಯದ ” ಕನ್ನಡದ ರಾಜ್ಯೋತ್ಸವ ನಮ್ಮದಮ್ಮ ” ಹಾಡಿನ ಆದ್ಬಮ್ ನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಸಾಹಿತ್ಯ ಪ್ರೇಮಿಗಳು ಆದ ಪ್ರದೀಪ್ ಕುಮಾರ್ ಕಲ್ಕೂರ ಲೋಕಾರ್ಪಣೆಗೊಳಿಸಲಿದ್ದಾರೆ.

ಈ ಆಲ್ಬಮ್ ನಲ್ಲಿ ಖ್ಯಾತ ಆರ್ಯಭಟ ಪ್ರಶಸ್ತಿ ಪುರಸ್ಕೃತ ಗಾಯಕ ಜಗದೀಶ್ ಪುತ್ತೂರು ಸಂಗೀತ ನಿರ್ದೇಶನ ಮಾಡಿ ಹಾಡಿದ್ದು, ಕ್ಯಾಲೀಕಟ್ಟಿನಲ್ಲಿ ಹಾಡಿನ ಮುದ್ರಣ ನಡೆದಿದೆ. ವಿಡಿಯೋ ಆಲ್ಬಮ್ ನ ನಿರ್ದೇಶನದ ಹೊಣೆಯನ್ನು ನಿರ್ದೇಶಕ ಶ್ಯಾಮ್ ಸುದರ್ಶನ್ ಹೊಸಮೂಲೆ ಹೊತ್ತುಕೊಂಡಿದ್ದಾರೆ. ಸುನೀಲ್ ಶೆಟ್ಟಿ ಸುರತ್ಕಲ್ ನೃತ್ಯ ಸಂಯೋಜನೆ ಮತ್ತು ಎಕ್ಸಲೆಂಟ್ ಡ್ಯಾನ್ಸ್ ಗ್ರೂಪ್ ನ ವಿದ್ಯಾ ರ್ಥಿಗಳು ನಟಿಸಿದ್ದಾರೆ. ನಟೇಶ್ ಭಟ್ ಕ್ಯಾಮರಾ ವರ್ಕ್ ಮಾಡಿದ್ದು, ಡ್ಯಾನ್ಸಿಂಗ್ ಸ್ಟಾರ್ ಖ್ಯಾತಿಯ ಅಧ್ವಿಕಾ ಶೆಟ್ಟಿh ವಿಶೇಷ ಪಾತ್ರದಲ್ಲಿ ಕಾಣಿಕೊಂಡಿದ್ದಾರೆ. ಈ ಗಾಗಲೇ ತೀರ್ವ ನಿರೀಕ್ಷೆ ಮೂಡಿಸಿದ ವಿಡಿಯೋ ಅಲ್ಬಮ್ ಲೋಕಾರ್ಪಣೆಗೆ ಸಿದ್ಧವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

Leave a Response