Wednesday, January 22, 2025
ಸುದ್ದಿ

ಕಲಿಕೆಯೊಂದಿಗೆ ಕ್ರೀಡೆಗೆ ಸಮಪಾಲು ದೊರೆಯಲಿ: ಸುಬ್ಬಯ್ಯ ಗೌಡ – ಕಹಳೆ ನ್ಯೂಸ್

ಪುತ್ತೂರು: ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯ ಜೊತೆಗೆ ಕ್ರೀಡೆಯ ಬಗೆಗಿನ ಆಸಕ್ತಿ ಬಹಳ ಮುಖ್ಯ. ಕ್ರೀಡಾ ಪ್ರತಿಭೆಗಳ ಅನಾವರಣದ ಅವಕಾಶ ಪ್ರತಿಯೊಬ್ಬ ವಿದ್ಯಾರ್ಥಿಗೂ ದೊರೆಯಬೇಕು. ಏಕೆಂದರೆ, ಪ್ರಸ್ತುತ ಕಾಲದಲ್ಲಿ ಶಾಲಾ ಕಾಲೇಜುಗಳು ಕ್ರೀಡೆಗೆ ಪ್ರತ್ಯೇಕ ಮೈದಾನವನ್ನು ಕಲ್ಪಿಸಿಕೊಟ್ಟಿವೆ.

ಇದರಿಂದ ಎಲ್ಲಾ ವಿದ್ಯಾರ್ಥಿಗಳು ಸಮಾನ ಅವಕಾಶವನ್ನು ಪಡೆದುಕೊಳ್ಳುತ್ತಾ, ಕ್ರೀಡಾ ಸಾಧನೆಯನ್ನು ಮಾಡಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿ ನ್ಯಾಷನಲ್ ವೈಟ್ ಲಿಫ್ಟರ್ ಸುಬ್ಬಯ ಗೌಡ ಹೇಳಿದರು. ಇವರು ವಿವೇಕಾನಂದ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಧ್ವಜಾರೋಹಣಗೈದು, ಸನ್ಮಾನ ಸ್ವೀಕರಿಸಿ ಶುಕ್ರವಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕ್ರೀಡಾಕ್ಷೇತ್ರದ ಆಸಕ್ತಿಯ ಜೊತೆಗೆ ನಿರಂತರ ತರಬೇತಿಯೂ ಮುಖ್ಯ. ಇದರಿಂದ, ಕ್ರೀಡಾಪಟು ತನ್ನ ಸಾಧನೆಯಿಂದಾಗಿ ಬಹುಬೇಗನೆ ಉದ್ಯೋಗವನ್ನು ಪಡೆಯಲು ಸಹಕಾರಿಯಾಗುತ್ತದೆ. ಕಠಿಣ ಶ್ರಮ ವಹಿಸಿ ಎಳವೆಯಿಂದಲೂ ಕ್ರೀಡೆಯಲ್ಲಿ ನಿರಂತರವಾಗಿ ತೊಡಗಿಕೊಂಡರೆ ಮುಂದೆ ಅದುವೇ ನಮ್ಮನ್ನು ಸಾಧನೆಗೆ ತೆರೆದಿಡುವಂತೆ ಮಾಡುತ್ತದೆ ಎಂದು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ, ನಾವು ಯಾವಾಗಲೂ ಏನನ್ನು ಮಾಡುತ್ತೇವೆ ಎಂದು ಈ ಜಗತ್ತಿಗೆ ಹೇಳುವುದರ ಬದಲಾಗಿ ಸಾಧನೆಯನ್ನು ಮಾಡಿ ತೋರಿಸಬೇಕು. ಋಣಾತ್ಮಕ ಯೋಚನೆಗಳಿಗೆ ಕಿವಿಯಾಗದೆ ಕೇವಲ ಧನಾತ್ಮಕತೆಯತ್ತ ಸಾಗಬೇಕು. ಹಾಗೆಯೇ, ನಿನ್ನಿಂದ ಸಾಧ್ಯವಿಲ್ಲದ ಕೆಲಸ ಎಂದು ಹೇಳುವವರ ಮಾತಿಗೆ ಕಿವಿಗೊಡದೆ, ಕಾರ್ಯಚಿತ್ತದತ್ತ ನಾವು ಸಾಗಬೇಕು ಎಂದು ವಿದ್ಯಾರ್ಥಿ ಕ್ರೀಡಾಪಟುಗಳಿಗೆ ಶುಭಹಾರೈಸಿದರು.

ಕ್ರೀಡೋತ್ಸವದ ಅಂಗವಾಗಿ ಕಾಲೇಜಿನ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಗೆ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು. ನಂತರ ಸಭಾ ಕಾರ್ಯಕ್ರಮದ ಕೊನೆಯಲ್ಲಿ ಮತದಾನ ಮಾಡುವುದರ ಬಗೆಗೆ ಪ್ರಮಾಣ ವಚನವನ್ನೂ ಸ್ವೀಕರಿಸಲಾಯಿತು.

ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಕೃಷ್ಣ ಕಾರಂತ, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರ ನಾರಾಯಣ ಭಟ್, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ.ವೆಂಕಟರಮಣ ಭಟ್ ಉಪಸ್ಥಿತರಿದ್ದರು.

ಕ್ರೀಡಾ ಕಾರ್ಯದರ್ಶಿ ಜೀವನ್ ಪಿ ಆರ್ ಸ್ವಾಗತಿಸಿ, ಜೊತೆ ಕ್ರೀಡಾ ಕಾರ್ಯದರ್ಶಿ ನಿರೀಕ್ಷಾ ವಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ ವಿ ಎಸ್ ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣದ ಸಹ ನಿರ್ದೇಶಕ ಯತೀಶ್ ಕುಮಾರ್ ಸಹಕರಿಸಿದರು.