ಬಿಸಿರೋಡ್‌ನಲ್ಲಿ ಉಜ್ವಲ ಯೋಜನೆಯಡಿ 2ನೇ ಹಂತದ ಉಚಿತ ಅಡುಗೆ ಅನಿಲ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶ – ಕಹಳೆ ನ್ಯೂಸ್
ಬಿಸಿರೋಡ್: ಮೊಘಲರನ್ನು ಹೊರತು ಪಡಿಸಿದರೆ ಭಾರತವನ್ನು ಅತ್ಯಂತ ಹೆಚ್ಚು ಕೊಳ್ಳೆ ಹೊಡೆದ್ದು ಕಾಂಗ್ರೆಸ್. ಅಚ್ಛೇ ದಿನ್ ಬರಬೇಕಾದ್ದು ಕಾಂಗ್ರೆಸ್‌ಗೆ ಅಲ್ಲ, ಈ ದೇಶದ ಜನಸಾಮಾನ್ಯರಿಗೆ ಎಂದು ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಂಸದೀಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಹ್ಲಾದ ಜೋಷಿ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಸಿರೋಡ್ ವೃತ್ತದ ಮೈದಾನದಲ್ಲಿ ಉಜ್ವಲ ಯೋಜನೆಯಡಿ ಎರಡನೇ ಹಂತದ ಉಚಿತ ಅಡುಗೆ ಅನಿಲ ವಿತರಣೆ ಮತ್ತು ಫಲಾನುಭವಿಗಳ ಸಮಾವೇಶದಲ್ಲಿ ಪ್ರಮುಖರಾಗಿ ಮಾತನಾಡಿದರು.
ಇನ್ನು ಅಚ್ಛೇ ದಿನ್ ಒಳ್ಳೆಯ ಜನರಿಗೆ ಬರುವುದು, ಕಾಂಗ್ರೆಸ್‌ಗೇ ಅಲ್ಲ. ರಸ್ತೆ, ಗ್ಯಾಸ್ ನೀಡಲು ಕಾಂಗ್ರೆಸ್‌ನವರಿಗೆ ಸಾಧ್ಯವಾಗಿಲ್ಲ. ಎಂದು ನಳೀನ್ ಕುಮಾರ್ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.