Wednesday, January 22, 2025
ಸುದ್ದಿ

ಕಾವೂರಿನ ಗಾಂಧಿನಗರದಲ್ಲಿರುವ ಕಾಲೇಜು ವಿದ್ಯಾರ್ಥಿಗಳ ಸಮಸ್ಯೆಗೆ ಸ್ಪಂದಿಸಿದ ಶಾಸಕ – ಕಹಳೆ ನ್ಯೂಸ್

ಕಾವೂರಿನ ಗಾಂಧಿನಗರದಲ್ಲಿರುವ ಸರಕಾರಿ ಅನುದಾನಿತ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ಸಮಸ್ಯೆಗೆ ಶಾಸಕ ಡಾ|ಭರತ್ ಶೆಟ್ಟಿಯವರು ಕೂಡಲೆ ಸ್ಪಂದಿಸಿದ್ದಾರೆ.

ಕಳೆದ ಮೂರು ವರ್ಷಗಳಿಂದ ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದ ವಿದ್ಯಾರ್ಥಿಗಳು ಸಂಬಂಧಪಟ್ಟವರಿಗೆ ಮನವಿಯನ್ನು ಮಾಡಿದ್ದರೂ ಯಾರೂ ಸ್ಪಂದಿಸದೇ ಇದ್ದಾಗ ಕಡೆಯ ಪ್ರಯತ್ನವಾಗಿ ಶಾಸಕ ಡಾ|ಭರತ್ ಶೆಟ್ಟಿಯವರಲ್ಲಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಕ್ಷಣ ಸ್ಥಳದಲ್ಲಿದ್ದ ಸಮಬಂಧ ಪಟ್ಟ ಅಧಿಕಾರಿಗಳಿಗೆ ಶೀಘ್ರದಲ್ಲಿ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸೂಚಿಸಿದ್ದಾರೆ. ಶಾಸಕರ ಸೂಚನೆಯಂತೆ ಎರಡೂವರೆ ಲಕ್ಷದ ಕಾಮಗಾರಿಯನ್ನು ಸೋಮವಾರದಿಂದಲೇ ಪ್ರಾರಂಭಿಸುವುದಾಗಿ ಇಂಜಿನಿಯರ್ ತಿಳಿಸಿದ್ದಾರೆ.