Tuesday, January 21, 2025
ಸುದ್ದಿ

ಜಯಂತ ಕಾಯ್ಕಿಣಿಗೆ ಒಲಿಯಿತು 2019 ರ ಡಿಎಸ್‌ಸಿ ಪ್ರಶಸ್ತಿ – ಕಹಳೆ ನ್ಯೂಸ್

ಮುಂಬೈ ಮಹಾನಗರಿಯನ್ನು ಹಿನ್ನೆಲೆಯಲ್ಲಿಟ್ಟುಕೊಂಡು ರಚಿಸಿದ ‘ನೋ ಪ್ರೆಸೆಂಟ್ ಪ್ಲೀಸ್’ ಕಥಾಸಂಕಲನಕ್ಕೆ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರಿಗೆ ದಕ್ಷಿಣ ಏಷ್ಯಾ ಸಾಹಿತ್ಯ 2019 ರ ಡಿಎಸ್‌ಸಿ ಪ್ರಶಸ್ತಿ ಒಲಿದಿದೆ.

ಈ ಕಥೆಗಳನ್ನು ಅನುವಾದ ಮಾಡಿದ ತೇಜಸ್ವಿನಿ ನಿರಂಜನ ಕೂಡ ೨೫,೦೦೦ ಡಾಲರ್ ಮೊತ್ತದ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಟಾಟಾ ಸ್ಟೀಲ್ ಕೋಲ್ಕತಾ ಸಾಹಿತ್ಯ ಸಮ್ಮೇಳನದಲ್ಲಿ ಈ ಘೋಷಣೆ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

‘ಅನುವಾದ ಮತ್ತು ಕಿರು ಕಥೆ ವಿಭಾಗದಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವುದು ವಿಶೇಷ ಮತ್ತು ಸಂತೋಷಕರ ಸಂಗತಿ. ಸಾಮಾನ್ಯವಾಗಿ ಹೆಚ್ಚಿನ ಗೌರವಗಳು ಬೃಹತ್ ಪುಸ್ತಕಗಳಿಗೆ, ಬೃಹತ್ ಕಾದಂಬರಿಗಳಿಗೆ ದೊರಕುತ್ತವೆ. ತೇಜಸ್ವಿನಿ ಅವರನ್ನು ಕೂಡ ತೀರ್ಪುಗಾರರು ಸಮಾನವಾಗಿ ಗುರುತಿಸಿರುವುದು ನನಗೆ ತುಂಬಾ ಖುಷಿ ನೀಡಿದೆ’ ಎಂದು ಕಾಯ್ಕಿಣಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಗೌರವ ಪಾಕಿಸ್ತಾನಿ-ಬ್ರಿಟಿಷ್ ಕಾದಂಬರಿಗಾರ್ತಿ ‘ಹೋಮ್ ಫೈರ್’, ಪಾಕಿಸ್ತಾನದ ಕಾದಂಬರಿಕಾರ ಮೊಹ್ಸಿನ್ ಹಮೀದ್ ಅವರ ‘ಎಕ್ಸಿಟ್ ವೆಸ್ಟ್’, ನೀಲ್ ಮುಖರ್ಜಿ ಅವರ ‘ಎ ಸ್ಟೇಟ್ ಆಫ್ ಫ್ರೀಡಂ’, ಸುಜಿತ್ ಸರಫ್ ಅವರ ‘ಹೀರಾಲಾಲ್ ಆಂಡ್ ಸನ್ಸ್’ ಮತ್ತು ಮನು ಜೋಸೆಫ್ ಅವರ ‘ಮಿಸ್ ಲೈಲಾ ಆರ್ಮ್ಡ್ ಆಂಡ್ ಡೇಂಜರಸ್’ ಕೃತಿಗಳು ಸಹ ಸ್ಪರ್ಧೆಯಲ್ಲಿದ್ದವು. ಅವುಗಳ ನಡುವೆ ಪೈಪೋಟಿಯಲ್ಲಿ ಕಾಯ್ಕಿಣಿ ಅವರ ಕಥಾ ಸಂಕಲನ ಆಯ್ಕೆಯಾಗಿದೆ.

ಪ್ರಣಬ್ ಮುಖರ್ಜಿ, ನಾನಾಜಿ, ಭೂಪೇನ್ ಹಜಾರಿಕಾಗೆ ಭಾರತರತ್ನ ಸಾಹಿತ್ಯ ಪ್ರಶಸ್ತಿಗೆ ಇದ್ದ ಪೈಪೋಟಿಯನ್ನು ‘ರೇಸ್’ ಎಂದು ಕರೆಯುವುದನ್ನು ಇಷ್ಟಪಡುವುದಿಲ್ಲ ಎಂದಿರುವ ಅವರು, ಎಲ್ಲ ಬರಹಗಾರರೂ ಒಟ್ಟಿಗಿದ್ದೆವು ಎಂದಿದ್ದಾರೆ.

1976 ರಿಂದ 26 ವರ್ಷ ಮುಂಬೈನಲ್ಲಿ ನೆಲೆಸಿದ್ದ ಕಾಯ್ಕಿಣಿ ಅವರು ಅಲ್ಲಿನ ಬದುಕಿನ ಹಿನ್ನೆಲೆಯಲ್ಲಿ ಹಲವು ಕಥೆಗಳನ್ನು ರಚಿಸಿದ್ದಾರೆ. ಅವುಗಳನ್ನು ಮುಂಬೈ ಕಥೆಗಳೆಂದು ಅವರು ನಿರ್ದಿಷ್ಟವಾಗಿ ಗುರುತಿಸದೆ ಇದ್ದರೂ, ಅನುವಾದಿ ತೇಜಸ್ವಿನಿ ಅವರು ‘ನೋ ಪ್ರೆಸೆಂಟ್ಸ್ ಪ್ಲೀಸ್’ಅನ್ನು ಮುಂಬೈ ಕಥೆಗಳೆಂದು ಆಯ್ಕೆ ಮಾಡಿಕೊಂಡಿದ್ದರು.