Monday, January 20, 2025
ಸುದ್ದಿ

ದೇಶದ ಬಗೆಗಿನ ಚಿಂತನೆ ನಡೆಸುವುದು ಇಂದಿನ ಅಗತ್ಯ: ಪಿ.ಶ್ರೀನಿವಾಸ ಪೈ – ಕಹಳೆ ನ್ಯೂಸ್

ಪುತ್ತೂರು: ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನನ್ನು ತಾನು ಕೇವಲ ವಿದ್ಯಾರ್ಜನೆ, ಉದ್ಯೋಗ ಹಾಗೂ ವೈಯಕ್ತಿಕ ಸುಖಗಳಿಗೆ ಸೀಮಿತಗೊಳಿಸದೆ ದೇಶದ ಕುರಿತೂ ಚಿಂತನೆಯನ್ನು ನಡೆಸಬೇಕು. ದೇಶದ ಗೌರವ, ಸಾರ್ವಭೌಮತೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಕಾರ್ಯತತ್ಪರನಾಗಬೇಕು. ಆಗ ದೇಶ ಇನ್ನಷ್ಟು ಉತ್ಕೃಷ್ಟತೆಯೆಡೆಗೆ ಸಾಗಲು ಸಾಧ್ಯ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ ಹೇಳಿದರು.

ಅವರು ವಿವೇಕಾನಂದ ಪದವಿ ಹಾಗೂ ಪದವಿಪೂರ್ವ ಸಂಸ್ಥೆಗಳ ವತಿಯಿಂದ ಕಾಲೇಜಿನ ಆವರಣದಲ್ಲಿ ಶನಿವಾರ ಆಯೋಜಿಸಲಾದ ಗಣರಾಜ್ಯೋತ್ಸವ ಆಚರಣೆಯಂದು ಸಂದೇಶ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತೀಯ ಜನತಂತ್ರ ವ್ಯವಸ್ಥೆಯಲ್ಲಿ ಪ್ರಜೆಗಳೇ ಪ್ರಭುಗಳು. ಇಂತಹ ಅವಕಾಶವನ್ನು ಜನರಿಗೆ ಕಲ್ಪಿಸಿದ್ದು ಭಾರತೀಯ ಸಂವಿಧಾನ. ಅಂತಹ ಶ್ರೇಷ್ಟವಾದ ಹಾಗೂ ಪವಿತ್ರವಾದ ಸಂವಿಧಾನವನ್ನು ಘೋಷಿಸಿದ ದಿನವಾದ ಜನವರಿ 26 ಭಾರತೀಯರೆಲ್ಲರಿಗೂ ಪವಿತ್ರವಾದ ದಿನ. ಸ್ವಾತಂತ್ರಾ್ಯನಂತರವೂ ಸಣ್ಣ ಪುಟ್ಟ ಪ್ರದೇಶಗಳಾಗಿ ಪ್ರತ್ಯೇಕವಾಗಿಯೇ ಇದ್ದ ಭೂಪ್ರದೇಶಗಳೆಲ್ಲವೂ ಸಂವಿಧಾನದಡಿಯಲ್ಲಿ ಏಕತ್ವವನ್ನು ಪಡೆದುಕೊಂಡವು. ಇಂತಹ ವಿಶಿಷ್ಟವಾದ ರಾಷ್ಟ್ರದ ಹೆಚ್ಚುಗಾರಿಕೆಯನ್ನು ಉಳಿಸುವ ಯತ್ನ ನಮ್ಮದಾಗಬೇಕು ಎಂದು ನುಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ವರ್ಷದ ರಾಜಪಥ್‌ನ ಪೆರೇಡ್‌ಗೆ ವಿವೇಕಾನಂದ ಕಾಲೇಜಿನ ಎನ್‌ಸಿಸಿ ಸದಸ್ಯೆ ಸಾರ್ಜೆಂಟ್ ಪ್ರೀತಿ ಡಿ ಆಯ್ಕೆಯಾಗಿ ಇಂದು ರಾಜಧಾನಿಯ ಪಥಸಂಚಲನದಲ್ಲಿ ಭಾಗಿಯಾಗಿದ್ದಾರೆ. ತನ್ಮೂಲಕವಾಗಿ ಇಡಿಯ ಸಂಸ್ಥೆಗೆ ಗೌರವವನ್ನು ತಂದುಕೊಟ್ಟಿದ್ದಾರೆ. ಇಂತಹ ಸಾಧನೆಗಳು ನಮ್ಮ ವಿದ್ಯಾರ್ಥಿಗಳಿಂದ ಮತ್ತೆ ಮತ್ತೆ ಅನಾವರಣಗೊಳ್ಳಬೇಕು ಎಂದು ಕರೆನೀಡಿದರು.

ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಸಂಚಾಲಕ ಎಂ.ಟಿ.ಜಯರಾಮ ಭಟ್, ವಿವೇಕಾನಂದ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಜೀವನ್ ದಾಸ್, ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ಕೃಷ್ಣ ಕಾರಂತ್, ಡಾ.ರೋಹಿಣಾಕ್ಷ ಶಿರ್ಲಾಲು, ಗಣಿತಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೊ.ಶಂಕರನಾರಾಯಣ ಭಟ್, ಸ್ಕೌಟ್ ಅಂಡ್ ಗೈಡ್ಸ್ ಅಧಿಕಾರಿ ಈಶ್ವರಪ್ರಸಾದ್, ಎನ್‌ಸಿಸಿ ಅಧಿಕಾರಿ ಅತುಲ್ ಶೆಣೈ, ಕಾಲೇಜಿನ ಐಕ್ಯುಎಸಿ ಸಂಯೋಜಕ ಡಾ.ಶ್ರೀಧರ ಎಚ್.ಜಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯನಿರ್ವಹಣಾಧಿಕಾರಿ ಭಾಸ್ಕರ್, ಕಾಲೇಜಿನ ಉಪನ್ಯಾಸಕ, ಉಪನ್ಯಾಸಕೇತರ ವೃಂದ, ಎನ್‌ಸಿಸಿ, ಎನ್‌ಎಸ್‌ಎಸ್, ರೋರ‍್ಸ್ ಅಂಡ್ ರೇಂರ‍್ಸ್, ಸ್ಕೌಟ್ ಅಂಡ್ ಗೈಡ್ಸ್, ರೆಡ್‌ಕ್ರಾಸ್ ಸಂಘಟನೆಗಳ ಸದಸ್ಯರು, ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರು ಝಂಡಾ ಊಂಚಾ ರಹೇ ಹಮಾರಾ ಹಾಗೂ ರಾಷ್ಟ್ರಗೀತೆಗಳನ್ನು ಪ್ರಸ್ತುತಪಡಿಸಿದರು.