Monday, January 20, 2025
ಕ್ರೀಡೆಸುದ್ದಿ

ಪ್ರೋ ಕಬಡ್ಡಿ: ರಾಜ್ಯದ ನೂತನ ಕಾಪ್ತನ ಆಗಿ ಪುತ್ತೂರಿನ ಮುತ್ತು ಪ್ರಶಾಂತ್ ರೈ ಆಯ್ಕೆ – ಕಹಳೆ ನ್ಯೂಸ್

ಅಪ್ಪಟ ಗ್ರಾಮೀಣ ಸೊಗಡಿನ ಕ್ರೀಡೆ ಅಂದ್ರೆ ಅದು ಕಬಡ್ಡಿ. ಕಬಡ್ಡಿ ಈಗ ಜನಮೋಹಕತೆಯನ್ನು ಕಾಣುತ್ತಿರುವ ದೇಶದ ಪ್ರಮುಖ ಕ್ರೀಡೆಯಾಗಿದೆ. ಜನಪ್ರಿಯತೆಯ ತುತ್ತತುದಿಯಲ್ಲಿದ್ದ ಕ್ರಿಕೆಟ್‌ಗೂ ಸಡ್ಡು ಹೊಡೆಯುವಷ್ಟು ಬೆಳವಣಿಗೆಯನ್ನು ಕಬಡ್ಡಿ ಕಾಣುತ್ತಿದೆ. ಅದ್ರಲ್ಲೂ ಪ್ರೋ ಕಬಡ್ಡಿ ಅಂದ್ರೆ ಸಾಕು ಭಾರತೀಯರ ಕಿವಿಗಳು ನೆಟ್ಟಗಾಗುತ್ತವೆ. ಆಟಗಾರರು ಮೈದಾನಕ್ಕೆ ಇಳಿದರೆ ಸಾಕು, ಜನರಲ್ಲಿ ಕುತೂಹಲ ರೋಚಕತೆ ಮೈಯಲ್ಲಿ ಹರಿದಾಡಲು ಶುರುವಾಗುತ್ತೆ.

ಸಾಮಾನ್ಯ ಕ್ರೀಡಾಪಟುಗಳಲ್ಲಿ ಸಾಮಾನ್ಯರಾಗಿದ್ದ ಕಬಡ್ಡಿ ಆಟಗಾರರು ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಜನಪ್ರಿಯಗೊಳ್ಳುವುದರ ಜತೆಗೆ ಆರ್ಥಿಕವಾಗಿಯೂ ಸಶಕ್ತಗೊಳ್ಳುತ್ತಿದ್ದಾರೆ. ಇದಕ್ಕೆಲ್ಲ ಪ್ರೊ ಕಬಡ್ಡಿ ಲೀಗ್ ವೇದಿಕೆ ಕಲ್ಪಿಸಿಕೊಟ್ಟಿದೆ. ಇಂತಹ ವೇದಿಕೆಯನ್ನು ಸಮರ್ಥವಾಗಿ ಬಳಸಿಕೊಂಡವರಲ್ಲಿ ಕರ್ನಾಟಕದ ಪ್ರಶಾಂತ್ ಕುಮಾರ್ ರೈ ಸಹ ಒಬ್ಬರು.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರೋ ಕಬಡ್ಡಿ ಆಟದಲ್ಲಿ ಮಿಂಚಿನ ಆಟಗಾರನಾಗಿ ಹೊರಹೊಮ್ಮಿದ ಆಟಗಾರ ಅಂದ್ರೆ ಪುತ್ತೂರಿನ ಮುತ್ತು ಪ್ರಶಾಂತ್ ರೈ ಕೈಕಾರ. ಪ್ರಶಾಂತ್ ಇದೀಗ ಕರ್ನಾಟಕ ರಾಜ್ಯದ ನೂತನ ಕಾಪ್ತನ ಆಗಿ ಆಯ್ಕೆಯಾಗಿದ್ದಾರೆ. ಕೊಲ್ಲಾಪುರದಲ್ಲಿ ನಡೆಯುವ ಅಂತರ್ ರಾಜ್ಯ ಮಟ್ಟದ ಸೀನಿಯರ್ ಲೆವೆಲ್ ನ್ಯಾಷನಲ್ ಕಬಡ್ಡಿ ಟೂರ್ನಮೆಂಟ್‌ನಲ್ಲಿ ಪ್ರಶಾಂತ್ ರೈಯವರ ಆಟಗಾರರಾದ ರಾಹುಲ್, ಸಚಿನ್ ಸುವರ್ಣ, ಶಬ್ಬೀರ್ ಬಾಪು, ಪ್ರಪಂಚನ್, ಸುಕೆಶ ಹೆಗ್ಡೆ, ಅವಿನಶ್, ದರ್ಶನ್, ಮಧು ಶಣ್ಮುಗಂ, ಜೀವಕುಮಾರ್, ರಂಗರಾಜು. ಇವೆರೆಲ್ಲ ಕರ್ನಾಟಕ ರಾಜ್ಯವನ್ನ ಮುನ್ನಡೆಸಲಿದ್ದಾರೆ. ಇವರ ತಂಡಕ್ಕೆ ಕೋಚ್ ಬಿಸಿ ಸುರೇಶ್, ಕಾರ್ಯದರ್ಶಿ ಮುನಿರಾಜು, ಬಿಸಿ ರಮೇಶ್ ಸ್ಫೂರ್ತಿಯಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರ್ನಾಟಕದ ಪ್ರತಿಭಾವಂತ ರೇಡರ್ ಪ್ರಶಾಂತ್ ಕುಮಾರ್ ರೈ ಪ್ರೋ ಕಬಡ್ಡಿ ಆರನೇ ಆವೃತ್ತಿಯಲ್ಲಿ ಯು.ಪಿ ಯೋಧಸ್ ಫ್ರಾಂಚೈಸಿ ತಂಡವು 79 ಲಕ್ಷ ಮೊತ್ತವನ್ನ ನೀಡುವ ಮೂಲಕ ದಾಖಲೆ ಬರೆದಿದ್ದಾರೆ. ಇನ್ನು ‘ಬಿ’ ದರ್ಜೆಯ ಆಟಗಾರರ ಪೈಕಿ ಅತೀ ಹೆಚ್ಚು ಮೊತ್ತವನ್ನ ಪಡೆದ ಕರಾವಳಿಯ ಪುತ್ತೂರಿನ ಆಟಗಾರನೆಂಬ ಹಿರಿಮೆಯಯನ್ನ ಸಂಪಾದಿಸಿದ್ದಾರೆ.

ಪ್ರಸ್ತುತ ವರ್ಷದ ಕಬ್ಬಡಿ ಟೂರ್ನಿಯಲ್ಲಿ ಯುಪಿ ಯೋಧಾಸ್ ತಂಡವು ಸೆಮಿಫೈನಲ್ ಹಂತಕ್ಕೆ ಬರಲು ಮಿಂಚುಗತಿಯ ರೈಡಿಂಗ್ ಕಾರಣವಾಗಿತ್ತು. 2014 ರಲ್ಲಿ ಆರಂಭವಾದ ಪ್ರೋ ಕಬ್ಬಡಿಯಲ್ಲಿ ಮೊದಲಿಗೆ ತೆಲುಗು ಟೈಟಾನ್ಸ್, ಬಳಿಕ ದಬಾಂಗ್ ಡೆಲ್ಲಿ, ಹರಿಯಾಣ ಸ್ಟೀಲರ್ಸ್ ತಂಡದ ಪರವಾಗಿ ಕಳೆದ ಈದು ಆವೃತ್ತಿಗಳಲ್ಲಿ ಆಡುತ್ತಾ ಬಂದಿದ್ದಾರೆ. ಪ್ರತಿಯೊಂದು ಆಟದಲ್ಲಿಯು ಮೈನವಿರೇಳಿಸುವಂತೆ ಆಟವಾಡಿ ಅಭಿಮಾನಿಗಳ ಮನದಲ್ಲಿ ಮಿಂಚಿನಗತಿಯ ಆಟಗಾರ ಎಂಬ ಪಟ್ಟವನ್ನ ಅಲಂಗರಿಸಿ ಬಿಟ್ಟಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕೈಕಾರ ಮನೆತನದಲ್ಲಿ ಅರಳಿರುವ ಪ್ರಶಾಂತ್. ಸೀತಾರಾಮ್ ಮತ್ತು ಗೃಹಿಣಿ ತಾಯಿ ಸತ್ಯವತಿ ರೈ ಅವರ ಇಬ್ಬರು ಮಕ್ಕಳಲ್ಲಿ ಹಿರಿಯ ಮಗನಾಗಿದ್ದವರು., ಇವರ ತಂದೆ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದರು, ಪ್ರಶಾಂತ್‌ರ ಕಬ್ಬಡಿ ಕ್ಷೇತ್ರದ ಸಾಧನೆಯನ್ನ ನೋಡಲು ಇಂದು ತಂದೆ ತಾಯಿ ಇಬ್ಬರು ಇಲ್ಲ ಎಂಬ ನೋವು ಅನುಭವಿಸುತ್ತಿದ್ದಾರೆ. ಇದೀಗ , ಪತ್ನಿ ವಜ್ರೇಶ್ವರಿ ರೈ ಮತ್ತು ಪುತ್ರ ಶತಾಯು ರೈ ಜತೆ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ಕಾರಣ ಅಲ್ಲೇ ನೆಲೆಸಿದ್ದಾರೆ.

ಅಷ್ಟಕ್ಕೂ ಪ್ರಶಾಂತ್ ಶಾಲಾ ದಿನಗಳಲ್ಲಿ ಕಬಡ್ಡಿಯಿಂದ ದೂರ ಇದ್ದವರು. ಆದರೆ ಆಕಸ್ಮಿಕವಾಗಿ ಪಿಯುಸಿ ಓದುತ್ತಿದ್ದ ವೇಳೆ ಕಬಡ್ಡಿ ಕ್ರೀಡೆ ಬಗ್ಗೆ ಆಕರ್ಷಿತರಾದರು. ವೇಟ್‌ಲಿಫ್ಟರ್ ಆಗಬೇಕೆಂದುಕೊಂಡಿದ್ದ ಪ್ರಶಾಂಶ್‌ಗೆ ಕೈ ಬೀಸಿ ಕರೆದಿದ್ದು ಮಾತ್ರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಕಬಡ್ಡಿ ಮೈದಾನ. ಆ ಮೈದಾನದ ಧೂಳಿನಲ್ಲಿ ಆಡಿ ಬೆಳೆದ ಪ್ರಶಾಂತ್, ಕೋಚ್ ಹಬೀಬ್ ಮತ್ತು ಫಿಲೋಮಿನಾ ಕಾಲೇಜಿನ ಕೋಚ್ ಇಲಿಯಾಸ್ ಪಿಂಟೋ ಅವರ ಮಾರ್ಗದರ್ಶನದಲ್ಲಿ ಕಬಡ್ಡಿ ಆಟದ ಚಾಣಕ್ಷತನವನ್ನ ಮೈಗೂಡಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಸತತ ಮೂರು ವರ್ಷ ಮಂಗಳೂರು ಅಂತರ್‌ಕಾಲೇಜು ಟೂರ್ನಿಗಳಲ್ಲಿ ಫಿಲೋಮಿನಾ ಕಾಲೇಜಿಗೆ ಟ್ರೋಫಿ ಗೆದ್ದುಕೊಟ್ಟ ಪ್ರಶಾಂತ್, ಅಂತರ ವಿಶ್ವವಿದ್ಯಾಲಗಳ ಕಬಡ್ಡಿ ಟೂರ್ನಿಯಲ್ಲಿ ಮಂಗಳೂರು ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು. ಫಿಲೋಮಿನಾ ಕಾಲೇಜಿನಲ್ಲಿ ಪದವಿ ಪಡೆದ ಪ್ರಶಾಂತ್‌ಗೆ ಬದುಕು ಕಲ್ಪಿಸಿದ್ದು ಬೆಂಗಳೂರಿನ ವಿಜಯ ಬ್ಯಾಂಕ್.

ಉದ್ಯೋಗದ ಜತೆ ಜತೆಗೆ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದ ಪ್ರಶಾಂತ್, ಭಾರತ ತಂಡವನ್ನು ಪ್ರತಿನಿಧಿಸಬೇಕೆಂಬ ಮಹದಾಸೆ ಹೊಂದಿದ್ದರು. ಆದರೆ ಅದು ಕೈಗೂಡಲಿಲ್ಲ. ಮುಂದೆ ಛಲದಂಕ ಮಲ್ಲನಂತೆ ಮುನ್ನುಗ್ಗುತ್ತಾ ಬದುಕುದವರು, ಹೀಗಾಗಿ ವಿಜಯ ಬ್ಯಾಂಕ್ ಮತ್ತು ರಾಜ್ಯ ತಂಡದ ಹೃದಯ ಭಾಗವಾಗಿ ಗುರುತಿಸಿಕೊಂಡ ಪ್ರಶಾಂತ್‌ಗೆ, ಬದುಕು ಕಲ್ಪಿಸಿಕೊಟ್ಟ ಕಬಡ್ಡಿಯ ಮೇಲಿನ ಪ್ರೀತಿ ಹೆಮ್ಮರವಾಗಿ ಬೆಳೆದಿತ್ತು, ಅದನ್ನೇ ಇದೀಗ ದೇಶದಾದ್ಯಂತ ಪಸರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಇದೀಗ ಕೊಟಿ ಕೊಟಿ ಹಣವನ್ನ ಸುರಿದು ಪ್ರತಿಭಾನ್ವಿತ ಆಟಗಾರರನ್ನ ಖರೀದಿಮಾಡುತ್ತಿರುವುದೇ ಕಬ್ಬಡಿ ಆಟದ ಮಹತ್ವಕ್ಕೆ ಸಾಕ್ಷಿ.

ಪುಣ್ಯ ನೆಲದ ಪರಂಪರಾಗತ ಕ್ರೀಡೆಯಾದ ಕಬ್ಬಡಿಗೆ ಜನಜೀವನದಲ್ಲಿ ಅವಿಭಾಜ್ಯ ಸ್ಥಾನ. ಜನ ಕ್ರಿಕೆಟನ್ನು ನೋಡಿ ಮೆಚ್ಚಿಕೊಂಡಿದ್ದರು, ಕಬ್ಬಡಿಯನ್ನ ಒಪ್ಪಿ ಅಪ್ಪಿಕೊಂಡಿದ್ದಾರೆ, ತಮ್ಮದೆ ಮನದ ಗೂಡಲ್ಲಿ ಆರಾಧಿಸುತ್ತಿದ್ದಾರೆ. ಈ ಎಲ್ಲ ಪ್ರೀತಿಯ ಜ್ಯೋತಕವಾಗಿ ಹೊರಹೊಮ್ಮಿದ್ದು ಪ್ರೋ ಕಬ್ಬಡಿ ಪಂದ್ಯಾಟ. ಅದೇ ಈಗ ರಾಜ್ಯ ಕಬ್ಬಡಿ ತಂಡದ ನಾಯಕರಾಗಿ ಆಯ್ಕೆಯಾಗಿರುವ ಪ್ರಶಾಂತ್ ತಮ್ಮ ತಂಡವನ್ನು ಸಮರ್ಥ ರೀತಿಯಲ್ಲಿ ಮುನ್ನಡೆಸಿ ರಾಜ್ಯಕ್ಕೆ ಉತ್ತಮ ಹೆಸರು ತರಲಿ ಅನ್ನೊದೇ ನಮ್ಮ ಆಶಯ.