Tuesday, January 21, 2025
ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಶೀಘ್ರವಾಗಲಿದೆ | ರಕ್ತದಾನ ಶ್ರೇಷ್ಠ ದಾನ – ನವೀನ್ ಕುಲಾಲ್.

ಉಪ್ಪಿನಂಗಡಿ : ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗದಳದವತಿಯಿಂದ ಅಯೋಧ್ಯಾ ಬಲಿದಾನ್ ದಿವಸದ ಸಲುವಾಗಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ ಮಾತನಾಡಿದ ವಿಶ್ವ ಹಿಂದೂ ಪರಿಷದ್ ಪುತ್ತೂರು ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್ ಹಿಂದೂ ಸಮಾಜ ತ್ಯಾಗ ಬಲಿದಾನಗಳನ್ನು ದೇಶಕ್ಕಾಗಿ ಈ ಮಣ್ಣಿಗಾಗಿ ಮಾಡಿಕೊಂಡು ಬಂದಿದೆ. ಅಂದು ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣದ ಸಂಕಲ್ಪದೊಂದಿಗೆ ನಡೆದ ಹೋರಾಟದಲ್ಲಿ ಸಾವಿರಾರು ಬಲಿದಾನಗಳು ನಡೆದಿದೆ. ಆದರೆ, ಸಮಾಜಕ್ಕೆ ಕಪ್ಪುಚುಕ್ಕೆಯಾಗಿದ್ದ ಗುಬ್ಬಸ್ಸಿನ ಧ್ವಂಸವಾಯಿತು. ಇನ್ನು ಭವ್ಯ ರಾಮ ಮಂದಿರ ನಿರ್ಮಾಣವಾಗಬೇಕಾಗಿದೆ. ಅಂದು ಯಾವ ರೀತಿ ಧರ್ಮಸಂಸದ್ ನಲ್ಲಿ ಸಂತರು ನಿರ್ಣಯ ಕೈಗೊಂಡು ಕರಸೇವೆ ನಡೆಸಿದರೋ ಅದೇ ರೀತಿ ನಾಳಿದ್ದು ಉಡುಪಿಯಲ್ಲಿ ನಡೆಯುವ ಧರ್ಮಸಂಸದ್ ನಲ್ಲಿ ರಾಮ ಮಂದಿರ ನಿರ್ಮಾಣದ ಪ್ರಬಲ ನಿರ್ಣಯ ಕೈಗೊಳ್ಳಲಿದ್ದಾರೆ.

ರಕ್ತದಾನದ ಮಹತ್ವ ಅಪಾರವಾದುದು, ಯಾವ ಮನುಷ್ಯನು ರಾಜನೇ ಆಗಿರಲಿ ಅವನು ಸತ್ತ ಬಳಿಕ ಅವನ ಶವವನ್ನು ಮೂರುದಿನವೂ ಇಡಲು ಸಾಧ್ಯವಿಲ್ಲ. ಮಾನವೀಯತೆ ಮುಖ್ಯ ವಿಶ್ವ ಹಿಂದೂ ಪರಿಷದ್ ಯಾವತ್ತು ಪರೋಪಕಾರಿಗೊಣ ಉಳ್ಳದ್ದು, ಪ್ರತಿಯೊಬ್ಬರು ರಕ್ತದಾನ ಮಾಡಿ ಎಂದು ಕರೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ರೋಟರಿ ಬ್ಲಡ್ ಬ್ಯಾಂಕ್ ನ ವೈದ್ಯಾಧಿಕಾರಿಯಾದ ರಾಮಚಂದ್ರ ಭಟ್, ದರ್ಶನ್ ಎಂಟರ್ಪೈಸಸ್ಸ್ ನ ಮಾಲಕರಾದ ಸುದರ್ಶನ, ಕಾಮತ್ ಕೋಲ್ಡ್ ಹೌಸ್ ನ ಮಾಲಕರಾದ ಸಂತೋಷ್ ಕಾಮತ್, ವಿ.ಎಚ್.ಪಿ ಯ ಅಧ್ಯಕ್ಷರಾದ ಸಂದೀಪ್ ಕುಪ್ಪೆಟಿ, ಬಜರಂಗದಳದ ಸಂಚಾಲಕರಾದ ಮಹೇಶ್ ಬಜತ್ತೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದಲ್ಲಿ ಬಿ.ಜೆ.ಪಿ. ಜಿಲ್ಲಾಧ್ಯಕ್ಷರಾದ ಸಂಜೀವ ಮಠಂದೂರು, ಕೇಶವ ಬಜತ್ತೂರು, ರವಿ ಇಳಂತಿಲ, ಶ್ಯಾಮ ಸುದರ್ಶನ ಹೊಸಮೂಲೆ, ಅನೀಲ್ ಕುಮಾರ್, ರಮೇಶ್, ಚಿದಾನಂದ ಪಂಚೇರು, ಮಂಜುನಾಥ್ ಕಂಗಿನಾರುಬೆಟ್ಟು,ಕಿಷನ್ ಮತ್ತಿತರು ಉಪಸ್ಥಿತರಿದ್ದರು.

Leave a Response