Sunday, January 19, 2025
ರಾಜಕೀಯಸುದ್ದಿ

ಆಪರೇಷನ್ ಕಮಲ – ರೆಡ್ಡಿಯ ಪಾಳಯದಲ್ಲಿ ಯಾರ‍್ಯಾರು? – ಕಹಳೆ ನ್ಯೂಸ್

ರಾಜದ್ಯ ರಾಜಕಾರಣದಲ್ಲಿ ಆಪರೇಷನ್ ಕಮಲದ ಕಾರ್ಯಚರಣೆಯ ಅಬ್ಬರ ಸದ್ಯಕ್ಕೆ ತೆರೆ ಬಿದ್ದಂತೆ ಕಾಣುತ್ತಿದೆ, ಆದರೆ ತೆರೆಮರೆಯಲ್ಲಿ ಶಾಸಕರನ್ನು ಸೆಳೆಯಲು ಪ್ರಯತ್ನಗಳು ನಡೆದಿವೆ. ಎ ಶಾಸಕ ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿ ತಲೆಮರೆಸಿಕೊಂಡಿರುವ ಶಾಸಕ ಜೆ.ಎನ್. ಗಣೇಶ್ ಅವರು, ಮಾಜಿ ಸಚಿವ ಜನಾರ್ದನ ರೆಡ್ಡಿಯ ಪಾಳಯದಲ್ಲಿದ್ದು, ಬಿಜೆಪಿ ಸೇರಲು ಚಿಂತಿಸಿದ್ದಾರೆ ಎಂದು ಹೇಳಲಾಗಿದೆ.

ಹಿಂದೆ ಮುಂಬೈ ಹೋಟೆಲ್‍ನಲ್ಲಿ ತಂಗಿದ್ದ ಅತೃಪ್ತ ಶಾಸಕರೊಂದಿಗೆ ಜನಾರ್ದನ ರೆಡ್ಡಿ ಚರ್ಚೆ ನಡೆಸಿದ್ದರು ಎಂದು ಹೇಳಲಾಗಿದೆ. ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್ ಹಾಗೂ ಗಣೇಶ್ ಅವರೊಂದಿಗೆ ಜನಾರ್ದನ ರೆಡ್ಡಿ ಚರ್ಚೆ ನಡೆಸಿದ್ದರು. ಆದರೆ, ಕಾರಣಾಂತರದಿಂದ ಆಪರೇಷನ್ ಕಮಲ ಯಶಸ್ವಿಯಾಗಿರಲಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು


ಸದ್ಯ ತಲೆಮರೆಸಿಕೊಂಡಿರುವ ಗಣೇಶ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಆನಂದ್ ಸಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರೊಂದಿಗೆ ಮಧ್ಯಸ್ಥಿಕೆ ವಹಿಸಲು ಗಣೇಶ್ ಪ್ರಯತ್ನ ನಡೆಸಿದ್ದಾರೆ. ರಾಜಿ ಮೂಲಕ ಪ್ರಕರಣ ಇತ್ಯರ್ಥಗೊಳಿಸಲು ಸಂಧಾನಕ್ಕೆ ಹಲವರನ್ನು ಕಳುಹಿಸಿದ್ದಾರೆ.
ನಿನ್ನೆ ಶಾಸಕ ನಾಗೇಂದ್ರ, ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಮತ್ತು ಗಣೇಶ್ ಅವರ ನಡುವೆ ರಾಜಿ ಸಂಧಾನಕ್ಕೆ ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. ಈ ಬೆಳವಣಿಗೆಗಳ ನಡುವೆ ಗಣೇಶ್, ಜನಾರ್ದನ ರೆಡ್ಡಿ ಜೊತೆಗೆ ಸೇರಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು