Recent Posts

Sunday, January 19, 2025
ರಾಜಕೀಯಸುದ್ದಿ

ಸಮ್ಮಿಶ್ರ ಸರ್ಕಾರ ಎಲ್ ಓ ಸಿ ಇದ್ದ ಹಾಗೆ; ಸತೀಶ್ ಜಾರಕಿಹೊಳಿ – ಕಹಳೆ ನ್ಯೂಸ್

ಇನ್ನು ನಾಲ್ಕು ವರ್ಷ ಮೂರು ತಿಂಗಳು ಬಿಜೆಪಿ ಆಪರೇಷನ್ ಕಮಲ ಮಾಡುತ್ತಲೇ ಇರುತ್ತದೆ. ಸಮ್ಮಿಶ್ರ ಸರ್ಕಾರ ಅನ್ನುವುದು ಎಲ್ ಓಸಿ ಇದ್ದ ಹಾಗೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರ ಅನ್ನೋದು ಎಲ್ ಓಸಿ ಇದ್ದಂಗೆ, ಯಾವಾಗಲೂ ನಾವು ಅಲರ್ಟ್ ಆಗಿರಬೇಕು. ಇಲ್ಲದಿದ್ದರೆ ನಮ್ಮ ಮೇಲೆ ಫೈರ್ ಮಾಡಿ ಬಿಡುತ್ತಾರೆ ಎಂದರು.

ಇನ್ನು ಕೈ ಶಾಸಕರ ಗಲಾಟೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಕೇವಲ ಒಂದು ದಿನ ಈಗಲ್ ಟನ್ ರೆಸಾರ್ಟ್ ನಲ್ಲಿ ನಾನಿದ್ದೆ. ಮರುದಿನ ನೀವು ಇಲ್ಲಿರೋದು ಅವಶ್ಯಕತೆ ಇಲ್ಲ ಎಂದು ಪಕ್ಷದ ಹಿರಿಯರು ನಮ್ಮನ್ನು ಕಳುಹಿಸಿದರು. ಮರುದಿನ ಗಲಾಟೆ ನಡೆದಿದ್ದರಿಂದ ಹೆಚ್ಚಿನ ಮಾಹಿತಿ ನನಗಿಲ್ಲ. ಗಲಾಟೆಗೂ ಮುನ್ನ ಅಲ್ಲಿ ಸಂದರ್ಭ ಏನಿತ್ತು? ಎಂಬುದರ ಬಗ್ಗೆ ಗೊತ್ತಿಲ್ಲ. ಕೆಲವೊಂದು ಬಾರಿ ಈ ರೀತಿಯ ಘಟನೆಗಳು ನಡೆಯುತ್ತವೆ. ಆರಂಭದಲ್ಲಿ ಶಾಸಕ ಗಣೇಶ್ ವಿರುದ್ಧ ಯಾರೂ ದೂರು ದಾಖಲಿಸಿರಲಿಲ್ಲ.ಇದೀಗ ದೂರು ದಾಖಲಾಗಿದ್ದು, ಪೊಲೀಸರು ಶಾಸಕರನ್ನು ಹುಡುಕುತ್ತಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು