ಸಿದ್ದಗಂಗಾ ಶ್ರೀಗಳಿಗೆ `ಭಾರತ ರತ್ನ’ ಸಿಗದ ಹಿನ್ನೆಲೆ : ಕೇಂದ್ರಕ್ಕೆ ಬಾಬಾ ರಾಮ್‍ದೇವ್ ಕಿವಿಮಾತು – ಕಹಳೆ ನ್ಯೂಸ್
ಸಿದ್ದಗಂಗಾ ಮಠದ ಶ್ರೀಗಳಿಗೆ ಕೇಂದ್ರ ಸರ್ಕಾರವು ಭಾರತ ರತ್ನ ನೀಡದೇ ಇರುವುದು ಬೇಸರ ತಂದಿದೆ ಎಂದು ಯೋಗಗರು ಬಾಬಾ ರಾಮ್ ದೇವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಹರ್ಷಿ ದಯಾನಂದ ಸರಸ್ವತಿ, ಸ್ವಾಮೀ ವಿವೇಕಾನಂದ ಅಂತಹ ಮಾಹನ್ ಸನ್ಯಾಸಿಗಳನ್ನು ಕೊಟ್ಟ ದೇಶ ನಮ್ಮದು, ಆದರೆ ಇದುವರೆಗೂ ಅಂತಹ ಯಾವೊಬ್ಬ ಸನ್ಯಾಸಿಗೂ ಭಾರತ ರತ್ನ ನೀಡಿಲ್ಲ. ಇತ್ತೀಚೆಗಷ್ಟೇ ಶಿವೈಕ್ಯರಾದ ಸಿದ್ದಗಂಗಾ ಶ್ರೀಗಳಂತಹ ಸನ್ಯಾಸಿಗಳನ್ನು ಪುರಸ್ಕರಿ ಗೌರವಿಸಿ ಭಾರತ ರತ್ನ ಕೊಡುವುದರ ಬಗ್ಗೆ ಆಲೋಚನೆ ಮಾಡಿ ಎಂದು ಕೇಂದ್ರಕ್ಕೆ ಬಾಬಾ ರಾಮದೇವ್ ಕಿವಿಮಾತು ಹೇಳಿದ್ದಾರೆ.