Sunday, November 24, 2024
ಸುದ್ದಿ

ಅಮೃತಸಂಜೀವಿನಿ ತಂಡದಿಂದ 73 ಕುಟುಂಬಗಳಿಗೆ 20,41,050₹ ಲಕ್ಷ ಧನ ಸಹಾಯ | ವಜ್ರದೇಹಿ ಶ್ರೀಗಳ ಸಮರ್ಥ ಮಾರ್ಗದರ್ಶನ.

ಮಂಗಳೂರು : “ಸುಂದರ ಬದುಕು ದಿಡೀರೆಂದು ಘಟಿಸುವುದಿಲ್ಲ”, “ಪ್ರೀತಿ, ಸಂತೋಷ, ತಾಳ್ಮೆ ಮತ್ತು ತ್ಯಾಗಗಳಿಂದ ಅದನ್ನು ನಾವೇ ನಿರ್ಮಿಸಿಕೊಳ್ಳಬೇಕು”, “ಮನುಷ್ಯನ ನಿಜವಾದ ಆಸ್ತಿ ಬ್ಯಾಂಕಿನಲ್ಲಿರುವ ಸಂಪತ್ತಲ್ಲ, ತಲೆಯಲ್ಲೀರುವ ಜ್ಞಾನವೂ ಅಲ್ಲ”, “ಪ್ರೀತಿ ತುಂಬಿದ ಹೃದಯ, ಆಲಿಸುವ ಕಿವಿಗಳು, ಮತ್ತು ಸಹಾಯ ಮಾಡುವ ಕೈಗಳು”, “ಕನಸು ಮತ್ತು ಶ್ರದ್ದೆ ಜತೆಗೂಡಿದರೆ ಜಗತ್ತಿನಲ್ಲಿ ಏನನ್ನು ಬೇಕಾದರೂ ಸಾದಿಸಬಹುದು ಎಂಬುದಕ್ಕೆ ನಮ್ಮ ಈ #ಅಮೃತಸಂಜೀವಿನಿ® ಸಂಸ್ಥೆಯೇ ಸಾಕ್ಷಿ…” ಇಲ್ಲಿ ಸಮಾಜದ ಅಶಕ್ತರ ಕಷ್ಟಗಳನ್ನು ಆಲಿಸುವ  ಕಿವಿಗಳಾಗಿ, ಅವರಿಗೆ ಅಗತ್ಯ ಸಹಾಯ ನೀಡುವ ಕೈಗಳಾಗಿ, ನಿಸ್ವಾರ್ಥ ಹೃದಯದ ಸಂಜೀವಿನಿಗಳಿದ್ದು , ಇವರೇ  *ಅಮೃತಸಂಜೀವಿನಿ*ಯ ಆಸ್ತಿ.

ವಜ್ರದೇಹಿ ಶ್ರೀಗಳ ಮಾರ್ಗದರ್ಶನ :

ಜಾಹೀರಾತು
ಜಾಹೀರಾತು
ಜಾಹೀರಾತು

ಗುರುಗಳಾದ ವಜ್ರದೇಹಿ ಶ್ರೀಗಳ ಆಶೀರ್ವಾದ, ಉತ್ತಮ ಮಾರ್ಗದರ್ಶನ, ಹಾಗೂ ಸಂಜೀವಿನಿಗಳ ನಿಸ್ವಾರ್ಥಸೇವೆ ಹಾಗೂ ಶ್ರದ್ದೆಯಿಂದ ಕಷ್ಟಗಳ ನಡುವೆಯೂ ಸಮಾಜಕ್ಕಾಗಿ ಸ್ವಂದಿಸುವ ಸಂಜೀವಿನಿಗಳ ದೃಡಮನಸ್ಸಿನ ಸಹಾಯದಿಂದ ಅಮೃತಸಂಜೀವಿನಿ® ತನ್ನ ಸೇವಾಪಯಣದಲ್ಲಿ  *26 ಮಾಸಿಕ ಯೋಜನೆ ಹಾಗೂ 47   ತುರ್ತುಯೋಜನೆಗಳ  ಮೂಲಕ 73 ಕುಟುಂಬಗಳಿಗೆ 20,41,050₹ ಲಕ್ಷ* ಹಣವನ್ನು ಸಹಾಯ ಮಾಡಿ ಸಮಾಜಕ್ಕೆ ಮಾದರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಅಮೃತಸಂಜೀವಿನಿ®ಮಂಗಳೂರು ತನ್ನ 26ನೇ ಸೇವಾಯೋಜನೆ ಹಾಗೂ 45, 46, 47ನೇ ತುರ್ತು ಸೇವಾ ಯೋಜನೆಗಳನ್ನು ಸಂಜೀವಿನಿಗಳ ಸಹಕಾರದಿಂದ ಯಶಸ್ವಿಯಾಗಿ ಪೂರ್ತಿಗೋಳಿಸಿದೆ ಎನ್ನಲು ಹೆಮ್ಮೆ ಅನಿಸುತ್ತದೆ.

26ನೇ ಮಾಸಿಕ ಯೋಜನೆಯಾದ  ಬಂಟ್ವಾಳ  ತಾಲೂಕು ಕೆದಿಲ ಗ್ರಾಮಪಂಚಾಯತ್ ವ್ಯಾಪ್ತಿಯ ಎದುರ್ಕಳ ಮನೆ ನಿವಾಸಿ ಮೋನಪ್ಪಗೌಡರು ತನ್ನ ಹೆಂಡತಿ, ಮಗ ಹಾಗೂ ವೃದ್ಧ ತಂದೆ ತಾಯಿಯೊಂದಿಗೆ ಬಡತನದಲ್ಲಿಯೇ ಜೀವನ ಸಾಗಿಸುತ್ತಿದ್ದರು..

ಮೋನಪ್ಪಗೌಡರು  ತಮ್ಮ ಯೌವನದಲ್ಲಿ      ಸ್ವಯಂಸೇವಕ ಪಡೆಯನ್ನು ಕಟ್ಟಿ ರಾಷ್ಟ್ರೀಯ ಸ್ವಯಂಸೇವಕ ಸಂಘ ಕೆದಿಲದ ಶಾಖೆಯಲ್ಲಿ 8 ವರ್ಷ ಮುಖ್ಯ ಶಿಕ್ಷಕರಾಗಿ ಕೆಲಸ  ಮಾಡಿದ ಇವರು,ಮುಂದಿನ ಜೀವನೋಪಯಕ್ಕಾಗಿ ಅಲ್ಲಿ ಇಲ್ಲಿ ಉದ್ಯೋಗವನ್ನು ಮಾಡುತ್ತ ಕಷ್ಟಕರ ಜೀವನವನ್ನೇ ಸಾಗಿಸುತ್ತಿದ್ದರು..

ಈ ಕುಟುಂಬ ವಾಸಿಸುತ್ತಿರುವ ಮನೆಯು ತುಂಬಾ ಹಳೆಯದ್ದಾಗಿದ್ದು ಈಗಲೋ-ಆಗಲೋ ಬೀಳುವ ಪರಿಸ್ಥಿತಿಯನ್ನು ಅರಿತ ಇವರು ಹೊಸ ಮನೆಯನ್ನು ಕಟ್ಟಲು ಶುರು ಮಾಡಿದರು..

ಆದರೆ ವಿಧಿಯಾಟವೆಂಬತೆ ಇದೆ ಹೊತ್ತಿಗೆ ಮೋನಪ್ಪಗೌಡರಿಗೆ ಗಂಟಲಲ್ಲಿ ವಿಪರೀತ ನೋವು ಕಂಡಾಗ ಚಿಕಿತ್ಸೆಗಾಗಿ ವೈದ್ಯರನ್ನು ಸಂಪರ್ಕಿಸಿದಾಗ ಗಂಟಲು ಕ್ಯಾನ್ಸರ್‌ ಎಂದು ತಿಳಿಯಿತು.

ಇದ್ದ ಹಣವನ್ನೆಲ್ಲಾ ಕ್ಯಾನ್ಸರ್ ಚಿಕಿತ್ಸೆಗೆ ಖರ್ಚು ಮಾಡಿದ ಮೋನಪ್ಪಗೌಡರಿಗೆ ಈಗ ನಾಲಗೆಯಲ್ಲಿ ಗುಳ್ಳೆಗಳು ಬರಲು ಶುರುವಾಗಿ ವೈದ್ಯರ ಸಲಹೆಯಂತೆ ಶಸ್ತ್ರಚಿಕಿತ್ಸೆಯನ್ನು ಮಾಡಿಸಿದ ಇವರಿಗೆ ಈಗ ಸರಿಯಾಗಿ ಮಾತನಾಡಲು ಆಗುತ್ತಿಲ್ಲ..

ಇವೆಲ್ಲ ಕಷ್ಟಗಳ ನಡುವೆ ಇವರ ಹೆಂಡತಿ ಬೀಡಿಕಟ್ಟಿ ಈ ‌ಮನೆಗೆ ಆಧಾರಸ್ತಂಭವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಇವರ ತಂದೆ ತಾಯಿ, 7ನೇ ತರಗತಿ ಕಲಿಯುತ್ತಿರುವ ಮಗನ ಭವಿಷ್ಯ, ಆಗಲೋ-ಈಗಲೋ  ಬೀಳಲಿರುವ ಮನೆ, ಅದರ ಜೊತೆ ಮುಂದುವರಿಸಲು ಸಾದ್ಯವಿಲ್ಲದೇ ಅರ್ಧದಲ್ಲಿ ನಿಂತಿರುವ ಮನೆ, ಇವೆಲ್ಲಾ ಪರಿಸ್ಥಿತಿಯಿಂದ ಮೋನಪ್ಪಗೌಡರ ಕುಟುಂಬ ತತ್ತರಿಸಿ ಹೋಗಿದೆ‌..

ಇವರ ಈ ಕಷ್ಟಕರವಾದ ಪರಿಸ್ಥಿತಿಯನ್ನು ತಿಳಿದ ಸಂಜೀವಿನಿ ತಂಡವು ಅವರ ಮನೆಗೆ ಧಾವಿಸಿ ಸಾಂತ್ವನ ಹೇಳಿ ಇವರ ಈ ಪರಿಸ್ಥಿತಿಯನ್ನು 26 ನೇ ಮಾಸಿಕ ಯೋಜನೆಯನ್ನಾಗಿಸಿದ್ದು ಸಮಾಜದ   ಸಹಕಾರದಿಂದ 70,000₹ ಧನ ಸೇವೆಯನ್ನು ನೀಡಿತು. ಅದರ ಜೊತೆಗೆ 45ನೇ ತುರ್ತು ಸೇವಾ ಯೋಜನೆಗೆ ಅನಾರೋಗ್ಯದ ನಿಮಿತ್ತ ಭಾಸ್ಕರ ಆಚಾರ್ಯ ಅವರಿಗೆ 5,000₹, 46ನೇ ತುರ್ತು ಸೇವಾ ಯೋಜನೆಗೆ ಅಪಘಾತಕ್ಕೀಡಾದ ಮಾರಿಪಳ್ಳದ ಹರ್ಷಿತ್ ಎಂಬವರಿಗೆ 5,000₹ ಹಾಗೂ 47ನೇ ತುರ್ತು ಸೇವಾ ಯೋಜನೆಗೆ ಅನಾರೋಗ್ಯದ ನಿಮಿತ್ತ ನಿತ್ಯ ಪ್ರಕಾಶ್ ಅವರಿಗೆ 5,000₹ ಗಳ ಸಹಾಯ ಮಾಡಲಾಯಿತು.

26ನೇ ತಿಂಗಳ ಯೋಜನೆಗಳಿಗೆ ಸಹಕರಿಸಿದ ಎಲ್ಲಾ ಪ್ರೀತಿಯ ಸಹೃದಯಿ ಸಂಜೀವಿನಿಗಳಿಗೆ ಕೃತಜ್ಞತೆ ಹೇಳುತ್ತಾ ಅಮೃತಸಂಜೀವಿನಿ® ತನ್ನ 27ನೇ ತಿಂಗಳ ಸೇವಾ ಯೋಜನೆಗೆ ಮುಂದಡಿ ಇಡುತ್ತಿದೆ. ನಿಮ್ಮೆಲ್ಲರ ಸಹಕಾರ ಮುಂದಿನ ದಿನಗಳಲ್ಲಿಯೂ ಹೀಗೇ ಇರಲಿ ಎಂದು ಕೃತಜ್ಞರಾಗಿ ವಿನಂತಿಸುತ್ತಿದ್ದೆ.

Leave a Response