Sunday, January 19, 2025
ಸುದ್ದಿ

ಕರ್ನಾಟಕದ ಆದರ್ಶ ಗ್ರಾಮದಲ್ಲಿ ಗ್ರಾಮೊತ್ಸವ ಸಂಭ್ರಮ; ಇದು ಬಳ್ಪ ಗ್ರಾಮೋತ್ಸವ – ಕಹಳೆ ನ್ಯೂಸ್

ಪ್ರಧಾನಿಯವರ ಒಂದೊಂದೆ ಕನಸು ನನಸಾಗ್ತಾ ಇದೆ. ಅವರ ಅಭಿವೃದ್ದಿಯ ಪಾಠಗಳನ್ನು ಕೇಳಿ ಅದನ್ನ ಕಾರ್ಯನಿರ್ವಹಿಸ್ತಾ ಸಕಾರಗೊಳಿಸುವಲ್ಲಿ ಕಮಲ ಪಾಳಯದ ನಿಷ್ಠಾವಂತ ನಾಯಕರು ಇದ್ದಾರೆ. ಅದಕ್ಕೊಂದು ನಿದರ್ಶನ ಆದರ್ಶ ಗ್ರಾಮ ಅನ್ನಿಸಿಕೊಂಡ ಬಳ್ಪದಲ್ಲಿ ನಡೆದ ಗ್ರಾಮೋತ್ಸವ 2019. ಹೌದು ಪ್ರಧಾನಿ ಮೋದಿಯವರ ಅನೇಕ ಸಮಾಜ ಕಲ್ಯಾಣ ಯೋಜನೆಗಳಲ್ಲಿ ಆದರ್ಶ ಗ್ರಾಮ ಯೋಜನೆ ಕೂಡ ಒಂದು. ಅದನ್ನ ಸಮರ್ಪಕವಾಗಿ ಸಂಸದ ನಳಿನ್ ಕುಮಾರ್ ಕಟೀಲ್ ನೆರವೇರಿಸಿದ್ದಾರೆ.ಅಧ್ಯಕ್ಷತೆ ವಹಿಸಿದ್ದ ಸಂಸದ ನಳಿನ್ ಕುಮಾರ್ ಕಟೀಲ್, ಗ್ರಾಮ ವಿಕಾಸದ ಪರಿಕಲ್ಪನೆಯೂ ಆದರ್ಶ ಗ್ರಾಮದ ಪರಿಕಲ್ಪನೆಯೂ ಎರಡೂ ಒಂದೇ. ಕರ್ನಾಟಕದಲ್ಲಿ ಅತ್ಯುತ್ತಮವಾದ ಆದರ್ಶ ಗ್ರಾಮವಾಗಿ ಕಾರ್ಯ ನಿರ್ವಹಿಸುವ ಜವಾಬ್ದಾರಿ ಇದ್ರೆ ಅದು ಬಳ್ಪ ಗ್ರಾಮದ್ದು ಅಂತ ಸರಕಾರದಿಂದ ಒಪ್ಪಿಗೆ ಪಡೆದು ಸರ್ವೆ ನಡೆಸಿದ ವಿಶ್ವವಿದ್ಯಾಲಯ ತಿಳಿಸಿದೆ ಇಂದು ಹೆಮ್ಮೆಯ ವಿಚಾರ ಎಂದರು.
ಬಳ್ಪ ಗ್ರಾಮದಲ್ಲಿ ಹಬ್ಬದ ವಾತವರಣವೇ ಸೃಷ್ಟಿಯಾಗಿತ್ತು. ಪ್ರತಿಯೊಬ್ಬರ ಮುಖದಲ್ಲೂ ಸಂತೋಷದ ಹೊನಲು ತಾಂಡವವಾಡ್ತಾ ಇತ್ತು. ಈ ಸುಸಮಯದಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ರಮೇಶ್ ಜಿಗಜಿಣಗಿ ಕೂಡ ಉಪಸ್ಥಿತರಿದ್ರು. ಇದು ಉತ್ಸವ ಅಲ್ಲ, ಒಂದು ಉತ್ಸಾಹ. ಸಂಸದರ ಆದರ್ಶ ಗ್ರಾಮವನ್ನು ನೋಡಿ ನನಗಂತೂ ತುಂಬಾ ಸಂತೋಷವಾಯ್ತು. ಸರಕಾರದ ಹಣವನ್ನು ಬಳಸದೇ ನಳೀನ್ ಕಟೀಲ್ ವೈಯಕ್ತಿಕವಾಗಿ ಹಣವನ್ನು ತಂದು ಈ ಕಾರ್ಯಕ್ರಮವನ್ನು ಮಾಡಿದ್ದಾರೆ. ಇದು ಕೂಡ ಸಂತೋಷಕರ ವಿಚಾರ ಅಂದರು.
ಇದೇ ವೇಳೆ ದೇಶಕ್ಕಾಗಿ ಸೇವೆ ಸಲ್ಲಿಸಿದ ನಿವೃತ್ತ ಯೋಧರಿಗೆ ಗೌರವ ಸಲ್ಲಿಸಲಾಯಿತು. ಜೊತೆಗೆ ಬಳ್ಪಗ್ರಾಮದ ವಿವಿಧ ಕಾಮಗಾರಿಗಳ ಉದ್ಘಾಟನೆ, ಶಂಕು ಸ್ಥಾಪನೆಯೂ ಕೂಡ ನಡೆಯಿತು. ಸಭಾಕಾರ್ಯಕ್ರಮ ಮುಗಿದ ಮೇಲೆ ಕಟೀಲು ಮೇಳದಿಂದ ಯಕ್ಷಗಾನ ಬಯಲಾಟ ನಡೆಯಿತು.

ಒಟ್ಟಾರೆಯಾಗಿ ಆದರ್ಶ ಗ್ರಾಮ ನೆಲೆಯಲ್ಲಿ ನಡೆದ ಕಾರ್ಯಕ್ರಮ ನಿಜಕ್ಕೂ ಅರ್ಥಪೂರ್ಣವಾಗಿತ್ತು. ಇದೇ ರೀತಿ ರಾಜ್ಯದ ಪ್ರತಿಯೊಮದ ಗ್ರಾಮವೂ ಕೂಡ ವಿಕಾಸದ ಹಾದಿಯನ್ನ ಹಿಡಿಯಲಿ ಅನ್ನುವುದು ಎಲ್ಲರ ಆಶಯ..
ಶಿವಭಟ್ ಕಹಳೆ ನ್ಯೂಸ್ ಸುಬ್ರಹ್ಮಣ್ಯ

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು