Recent Posts

Sunday, January 19, 2025
ಸುದ್ದಿ

ಸುಳ್ಯದಲ್ಲಿ ಸುನಾದ ಸಂಗೀತೋತ್ಸವ – ಕಹಳೆ ನ್ಯೂಸ್

ಸುನಾದ ಸಂಗೀತ ಕಲಾ ಶಾಲೆಯ ಸುಳ್ಯ ಶಾಖೆಯ ವಾರ್ಷಿಕೋತ್ಸವ ಸುಳ್ಯದ ಜ್ಯೋತಿ ವೃತ್ತದ ಬಳಿ ಇರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸಂಗೀತ ಶಾಲೆಯ ಸಂಚಾಲಕ ವಿದ್ವಾನ್ ಕಾಂಚನ ಎ ಈಶ್ವರ ಭಟ್ ದೀಪೋಜ್ವಲನ ಮಾಡುವ ಮೂಲಕ ಉದ್ಘಾಟಿಸಿದರು. ವಿದ್ಯಾರ್ಥಿಗಳು ಗುರುವಂದನೆ ಕಾರ್ಯಕ್ರಮವನ್ನು ನೆರವೇರಿಸಿದರು. ದಿನದುದ್ದಕ್ಕೂ ವಿದ್ಯಾರ್ಥಿಗಳು ಕರ್ನಾಟಕ ಶಾಸ್ತ್ರೀಯ ಗಾಯನವನ್ನು ಪ್ರಸ್ತುತಪಡಿಸಿದರು. ವಿದ್ಯಾರ್ಥಿಗಳಿಗೆ ವಯಲಿನ್ ನಲ್ಲಿ ಪ್ರಣೀತ್ ಬಳ್ಳಕ್ಕುರಾಯ, ಧನಶ್ರೀ ಶಬರಾಯ, ಧನ್ಯಶ್ರೀ, ಲಯವಾದನದಲ್ಲಿ ಸುನಾದ ಸಂಗೀತ ಶಾಲೆಯ ವಿದ್ಯಾರ್ಥಿಗಳು ಸಹಕರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು