Recent Posts

Sunday, January 19, 2025
ಸುದ್ದಿ

‘ ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು’ ; ಕೊಡಗಿನಲ್ಲಿ ಗರ್ಜಿಸಿದ ಅನಂತ ಕುಮಾರ್ ಹೆಗಡೆ – ಕಹಳೆ ನ್ಯೂಸ್

ಕೊಡಗು[ಜ.27] ಸಮಾಜಕ್ಕೆ ಹಿಡಿದ ದೊಡ್ಡ ಗೆದ್ದಲು ಕಮ್ಯೂನಿಸ್ಟರು. ಹಿಂದು ಹುಡುಗಿ ಮೈ ಮುಟ್ಟಿದ ಕೈ ಇರಬಾರದು. ಇತಿಹಾಸ ಬರೆಯೋದೆ ಹೀಗೆ, ಪೌರುಷ ಇದ್ರೆ ಇತಿಹಾಸ ಬರೆಯಿರಿ ಎಂದು ಕೇಂದ್ರ ಸಚಿವ ಅನಂತ್‌ ಕುಮಾರ್ ಹೆಗಡೆ ಹೇಳಿದ್ದಾರೆ.

ಪರಿವರ್ತನಾ ಟ್ರಸ್ಟ್, ಹಿಂದೂ ಜಾಗರಣ ವೇದಿಕೆ ಆಯೋಜನೆ ಮಾಡಿದ್ದ ಸಮಾವೇಶದಲ್ಲಿ ಮಾತನಾಡಿ, ದೇವರಿಗೆ ದುರ್ಬಲರೆ ಬೇಕು,ಅದಕ್ಕೆ ಕುರಿ-ಕೋಳಿ ಬಲಿ ನೀಡಲಾಗುತ್ತದೆ. ಆನೆ ಹುಲಿಯನ್ನು ದೇವರಿಗೆ ಬಲಿ‌ಕೊಡ್ತಾರಾ, ನೀವು ಕೋಳಿ ಕುರಿ ಆಗಬೇಡಿ ದುರ್ಬಲರಾಗದೇ ಶೌರ್ಯ ವ್ಯಕ್ತಿಗಳಾಗಿ ಬೆಳೆಯಿರಿ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದೂ ಸಮಾಜ ಒಟ್ಟಾಗಿ ನಿಲ್ಲದಿದ್ರೆ ಮುಂದೆ ಕಷ್ಟವಾಗುತ್ತದೆ. ಕುತುಬ್ ಮಿನಾರ್ ಕಟ್ಟಿದ್ದು ಮುಸಲ್ಮಾನರಲ್ಲ. ಅದು ನಿರ್ಮಾಣವಾಗಿದ್ದು ಜೈನರ ಕಾಲದಲ್ಲಿ. ತಾಜ್ ಮಹಲ್ ಮುಸಲ್ಮಾನ ಕಟ್ಟಿಸಿದ್ದಲ್ಲ. ಹಲಫನಾಮದಲ್ಲಿ ಷಹಜಹಾನ್ ಸ್ವತಃ ಇದನ್ನು ಹೇಳಿದ್ದಾನೆ. ರಾಜಾ ಜಯಸಿಂಹನಿಂದ ಕೊಂಡುಕೊಂಡ ಕಟ್ಟಡ ಅದಾಗಿತ್ತು. ಬಳಿಕ ತೇಜೋ ಮಹಾಲಯ ತಾಜ್ ಮಹಲ್ ಆಯ್ತು ಎಂದು ಇತಿಹಾಸದ ವಿಚಾರ ಮಾತನಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮಸೀದಿ ಬಿದ್ರೆ ಎಲ್ಲಾ ಬರ್ತಾರೆ,ದೇವಸ್ಥಾನ ಬಿದ್ರೆ ಯಾರು ಬರಲ್ಲ. ದೇವಾಲಯ ಕೇವಲ ಕಟ್ಟಡ ಅಲ್ಲ, ಅದು ಭಾವನೆಗಳ ಆಲಯ. ಶಿವ ಅಂದ್ರೆ ಲಿಂಗವಾ? ಸೃಷ್ಟಿಯ ಧನಾತ್ಮಕ ಶಕ್ತಿಗೆ ಶಿವ ಅಂತ ಕರೀತಾರೆ. ಶಿವನಿಗೆ ಯಾವುದೇ ಆಕಾರ ಇಲ್ಲ, ಆಕಾರಗಳಿಲ್ಲದ್ದೇ ಶಿವ ಎಂದು ವ್ಯಾಖ್ಯಾನಿಸಿದರು. ಕೊಡಗಿನಲ್ಲಿ ನಡೆಯೋ ಸಮಾಜಘಾತಕ ಚಟುವಟಿಕೆಯನ್ನು ನೀವೆ ಗಮನಿಸಬೇಕು. ಮನೆಮುರುಕರು ಕೊಡಗು ಪ್ರವೇಶಿಸಿದರೆ ಮಣ್ಣಲ್ಲಿ ಮಣ್ಣಾಗಿಸಿ ಎಂದು ಹೇಳಿದರು.