ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿರುವ ಅಯೋಧ್ಯೆ ರಾಮಮಂದಿರ ಭೂ ವಿವಾದದ ಪ್ರಕರಣ ವಿಚಾರಣೆಯನ್ನು ಮತ್ತೊಮ್ಮೆ ಮುಂದಕ್ಕೆ ಹಾಕಲಾಗಿದೆ.
ಜ.11 ರಂದು ನಡೆದ ವಿಚಾರಣೆ ವೇಳೆ ನ್ಯಾಯಧೀಶ ಯು.ಯು ಲಲಿತ್, ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿದ ಪರಿಣಾಮ, ಹೊಸದಾಗಿ ಸಾಂವಿಧಾನಿಕ ಪೀಠವನ್ನು ಮುಖ್ಯ ನಾಯ್ಯಧೀಶ ರಂಜನ್ ಗೋಗಾಯ್ ರಚಿಸಿ, ಜ. 29 ರಂದು ವಿಚಾರಣೆ ನಡೆಸಲು ಸಿದ್ಧತೆ ನಡೆಸಲಾಗಿತ್ತು.
ಆದರೆ ಪಂಚಪೀಠದ ನ್ಯಾಯಾಧೀಶರಲ್ಲಿ ಒಬ್ಬರಾದ ನ್ಯಾ.ಎಸ್.ಎ. ಬೋಬ್ಡೆ ಅವರು ಮಂಗಳವಾರ ಲಭ್ಯರಿಲ್ಲದ ಕಾರಣ, ಪ್ರಕರಣವನ್ನು ಮತ್ತೆ ಮುಂದೂಡಲಾಗಿದೆ. ಈ ಬಗ್ಗೆ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಸುತ್ತೋಲೆಯನ್ನು ಹೊರಡಿಸಿದ್ದಾರೆ.