Monday, January 20, 2025
ಸುದ್ದಿ

ಗಣರಾಜ್ಯೋತ್ಸವದ ಶುಭದಿನದಂದು ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನಿಂದ ಅಶಕ್ತ ಕುಟುಂಬಗಳಿಗೆ ಧನ ಸಹಾಯ ಹಸ್ತಾಂತರ – ಕಹಳೆ ನ್ಯೂಸ್

ಸದಾ ಸಮಾಜಮುಖಿ ಸೇವಾ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ) ಸಂಸ್ಥೆಯ ವತಿಯಿಂದ 70ನೇ ಗಣರಾಜ್ಯೋತ್ಸವದ ಶುಭದಿನಂದಂದು ಸಮಾಜದ 4 ಅಶಕ್ತ ಕುಟುಂಬಗಳಿಗೆ 90,000 ರೂಪಾಯಿ ಧನ ಸಹಾಯ ಹಸ್ತಾಂತರ ಮಾಡಲಾಯಿತು.

ಹೃದಯದಲ್ಲಿ 3 ರಂಧ್ರಗಳಿಂದ ಸರಿಯಾಗಿ ರಕ್ತ ಚಲಾವಣೆಯಾಗದೆ ಯಾತನೆ ಅನುಭವಿಸುತ್ತಿರುವ ಮಂಗಳೂರು ತಾಲೂಕು ಕಲ್ಲಮುಂಡ್ಕೂರು ಅಗರಿ ಪ್ರಕಾಶ್ ಮಿರಾಂದ ಮತ್ತು ರೇನಿಟಾ ದಂಪತಿಗಳ 4 ತಿಂಗಳ ಮಗು ರೋಯಿಸ್ಟನ್ ನ ಚಿಕಿತ್ಸೆಗೆoದು ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ಕೆಲವು ದಿನಗಳ ಹಿಂದೆ ಸಾವನ್ನಪ್ಪಿದೆ ಮಗು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೆತ್ತವರ ಕಷ್ಟಕ್ಕೆ ರೂ.20,000 ಚೆಕ್ ಮೂಳೆ ಕ್ಯಾನ್ಸರ್ ನಿಂದ ಬಳಲುತ್ತಿರುವ ಮಂಗಳೂರು ತಾಲೂಕು ಪಕ್ಷಿಕೆರೆ ಕಾಪಿಕಾಡ್ ಹರೀಶ್ ಭಾರತಿ ದಂಪತಿಗಳ 3 ವರುಷದ ಮಗ ಚೇತನ್ ನ ಚಿಕಿತ್ಸೆಗೆ ರೂ. 25,000 ಚೆಕ್, ಕಣ್ಣಿನ ಅಂಧತ್ವದಿಂದ ಅರ್ಧದಲ್ಲೇ ನಿಂತ ಮಂಗಳೂರು ತಾಲೂಕು ಆಚಾರಿಜೇರ ಕಿಲೆಂಜಾರು ಝಕಾರಿಯರವರ ಮನೆ ದುರಸ್ತಿಗೆ ಸಹಾಯಕ್ಕೆ ರೂ.20,000 ಚೆಕ್ ಮತ್ತು 4 ವರುಷಗಳ ಹಿಂದೆ ಅಪಘಾತದಲ್ಲಿ ಎಡ ಕಾಲಿನ ಪಾದ ಕಳೆದುಕೊಂಡು ಮತ್ತೆ ಅದು ಸರಿಯಾಗಿ ಗುಣಮುಖವಾಗದೆ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿರುವ ಮಂಗಳೂರು ತಾಲೂಕು ಬಡಗಮಿಜಾರು ಅಂಗಡಿಗುತ್ತು ದಯಾನಂದ ಶೆಟ್ಟಿ ಮತ್ತು ಯಶೋಧರವರ ಮಗ ಅಂಬರೀಷ್ ರವರ ಚಿಕಿತ್ಸೆಗೆ ರೂ.25,000 ಚೆಕ್ ಅನ್ನು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಕಟೀಲು ಇಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.