ಮಾ. 4 ರಿಂದ 13 ರ ವರೆಗೆ ಪೊಳಲಿ ರಾಜರಾಜೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪೂರ್ವಭಾವಿ ಸಭೆ – ಕಹಳೆ ನ್ಯೂಸ್
ಮಾರ್ಚ್ 4 ರಿಂದ ಮಾರ್ಚ್ 13 ರ ವರೆಗೆ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ಬಂಟ್ವಾಳ ತಾಲೂಕಿನಿಂದ ಕ್ಷೇತ್ರಕ್ಕೆ ಹೊರಕಾಣಿಕೆ ಸಮರ್ಪಣೆ ಉದ್ದೇಶದಿಂದ ಪೂರ್ವಭಾವಿ ಸಭೆ ನಿನ್ನೆ ಸಂಜೆ ಹೋಟೆಲ್ ರಂಗೋಲಿ ಸಭಾಂಗಣದಲ್ಲಿ ನಡೆಯಿತು.
ಈ ಕಾರ್ಯಕ್ರಮದಲ್ಲಿ ಶಾಸಕ ರಾಜೇಶ್ ನಾಯಕ್ ಭಾಗವಹಿಸಿ ಮಾತನಾಡಿ ಪೊಳಲಿ ದೇವಸ್ಥಾನಕ್ಕೆ ಬ್ರಹ್ಮಕಲಶೋತ್ಸವ ಅಂಗವಾಗಿ ಬಂಟ್ವಾಳ ತಾಲೂಕಿನಿಂದ ಸಮರ್ಪಣೆಯನ್ನು ಮಾ. 5 ರಂದು ಮಾಡುವ ಬಗ್ಗೆ ನಿರ್ಧರಿಸಲಾಗಿದೆ. ತಾಲೂಕಿನ ಭಕ್ತರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸಿ ಹೊರೆಕಾಣಿಕೆ ನೀಡುವಂತೆ ವಿನಂತಿ ಮಾಡಿದರು.
ಜೊತೆಗೆ ತಾಲೂಕಿನಿಂದ ಅಕ್ಕಿ ಮತ್ತು ಸಕ್ಕರೆ ನೀಡುವ ಬಗ್ಗೆ ಅಲೋಚನೆ ಮಾಡಲಾಗಿದೆ, ಇದರ ಜೊತೆಗೆ ಭಕ್ತರ ಇತರ ವಸ್ತುಗಳನ್ನು ಸಮರ್ಪಣೆ ಮಾಡಬಹುದು. ಆದರೆ ಅಕ್ಕಿಯನ್ನು ನೀಡುವ ಭಕ್ತರು ಒಂದೇ ಗುಣಮಟ್ಟದ ಉತ್ತಮ ಅಕ್ಕಿಯನ್ನು ನೀಎಉವಂತೆಯೂಸಭೆಯಲ್ಲಿ ತಿಳಿಸಲಾಯಿತು.
ಮಾ. 5 ರಂದು ಮಧ್ಯಾಹ್ನ 3 ಗಂಟೆಗೆ ಬ್ರಹ್ಮ ಶ್ರೀ ನಾರಾಯಣ ಗುರು ಮಂದಿರದ ಸಮೀಪದಿಂದ ಅದ್ದೂರಿ ಮೆರವಣಿಗೆಯ ಮೂಲಕ ಕ್ಷೇತ್ರ ಕ್ಕೆ ಹೊರಡಲಾಗುವುದು . ಈ ಮೆರವಣಿಗೆ ಯಲ್ಲಿ ಎಲ್ಲಾ ಗಣ್ಯರು ಭಾಗವಹಿಸುವರು ಎಂದು ತಿಳಿಸಿದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಹೋಟೆಲ್ ರಂಗೋಲಿ ಮಾಲಕ ಚಂದ್ರಹಾಸ ಶೆಟ್ಟಿ ಅವರ ಸಂಚಾಲಕತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿರುವುದು. ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಏರ್ಯಲಕ್ಮೀನಾರಾಯಣ ಆಳ್ವ, ದೇವದಾಶ ಶೆಟ್ಟಿ, ಪದ್ಮನಾಭ ಕೊಟ್ಟಾರಿ, ಗೋವಿಂದ ಪ್ರಭು ಚಂದ್ರಪ್ರಕಾಶ್ ಶೆಟ್ಟಿ, ಸುಲೋಚನ ಜಿಕೆ ಭಟ್, ಮಚ್ಚೇಂದ್ರನಾಥ ಸಾಲಿಯಾನ್, ಸೇಸಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.