Tuesday, January 21, 2025
ರಾಜಕೀಯಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯನನ್ನು ಹೀಯಾಳಿಸಿದ ಜಗದೀಶ್ ಶೆಟ್ಟರ್ – ಕಹಳೆ ನ್ಯೂಸ್

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹೀನಾಯವಾಗಿ ಸೋತ ಸಿದ್ದರಾಮಯ್ಯ ಅವರನ್ನ ಮುಂದಿನ ಮುಖ್ಯಮಂತ್ರಿ ಎಂದು ಹೇಳುವ ಸಚಿವರಿಗೆ ನಾಚಿಕೆಯಾಗಬೇಕು ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ವಾಗ್ದಾಳಿ ನಡೆಸಿದರು.

ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಇನ್ನು ನಾಲ್ಕು ವರ್ಷ ಇರುವಾಗ ಮುಂದಿನ ಮುಖ್ಯಮಂತ್ರಿ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಬದಲಿಸಿ ಸಿದ್ದರಾಮಯ್ಯನನ್ನು ಮುಖ್ಯಮಂತ್ರಿ ಮಾಡಲು ಹೋರಟಿದ್ದೀರೋ ಹೇಗೆ ಎಂದು ಪ್ರಶ್ನಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಂಗ್ರೆಸ್ ಶಾಸಕರ ನಿಯಂತ್ರಿಸದಿದ್ದರೆ ರಾಜೀನಾಮೆ ನೀಡುವದಾಗಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬಂದಾಗಿನಿಂದ ಅಸ್ಥಿರತೆ ನಿರ್ಮಾಣವಾಗಿದೆ. ಕಾಂಗ್ರೆಸ್ ನವರಿಗೆ ಸಿಎಂ ಮೇಲೆ ವಿಶ್ವಾಸವಿಲ್ಲ. ಮನೆಬಾಗಿಲಿಗೆ ಬಂದು ಬೇಷರತ್ ಬೆಂಬಲ ನೀಡಿದ್ದ ಕಾಂಗ್ರೆಸ್ ಈಗ ಉಲ್ಟಾ ಹೊಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೈತ್ರಿ ಸರ್ಕಾರದ ವೈಫಲ್ಯ ಮರೆಮಾಚಲು ಬಿಜೆಪಿ ಟಾರ್ಗೆಟ್ ಮಾಡಲಾಗುತ್ತಿದೆ. ಕಾಂಗ್ರೆಸ್ ಕಿರಿಕಿರಿ ಜಾಸ್ತಿಯಾಗಿ ಸಿಎಂ ರಾಜೀನಾಮೆ ನೀಡುವದಾಗಿ ಹೇಳಿಕೆ ನೀಡಿದ್ದಾರೆ. ಇದೊಂದು ಕಾಂಗ್ರೆಸ್ ಜೆಡಿಎಸ್ ಪರಸ್ಪರ ಹೈಡ್ರಾಮ ಮಾಡುತ್ತಿವೆ. ಜನರು ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಈ ತರಹದ ಡ್ರಾಮಾ ಕೈಗೆತ್ತಿಕೊಂಡಿದೆ.

ಕುಮಾರಸ್ವಾಮಿ ರಾಜೀನಾಮೆ ಕೊಡುವುದಾದ್ರೆ ಕೊಟ್ಟು ಮನೆಗೆ ಹೋಗಲಿ. ಪರಸ್ಪರ ವಿಶ್ವಾಸ ಇಲ್ಲದ ಸರ್ಕಾರ ಬಹಳ ದಿನ ಇರಬಾರದು. ಕಾಂಗ್ರೆಸ್- ಜೆಡಿಎಸ್ ಜನಗಳದಿಂದ ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಆಡಳಿತ ನಡೆಸಲು ಆಗದಿದ್ದರೆ ಸಿಎಂ ರಾಜೀನಾಮೆ ನೀಡಲಿ. ಕುಮಾರಸ್ವಾಮಿ ಕಿರಿಕಿರಿ ಜಾಸ್ತಿಯಾದ್ರೆ ಕಾಂಗ್ರೆಸ್ ಬೆಂಬಲ ಹಿಂಪಡಿಯಿರಿ ಎಂದು ಶೆಟ್ಟರ್ ಸಲಹೆ ನೀಡಿದರು. ಬಿಜೆಪಿಗೆ ಸ್ಥಿರ ಸರ್ಕಾರ ಮಾಡಲು ಅವಕಾಶ ನೀಡಿ.

ಜನತೆಯನ್ನು ಮುರ್ಖರನ್ನಾಗಿ ಮಾಡುವುದು ಜೆಡಿಎಸ್- ಕಾಂಗ್ರೆಸ್ ನಿಲ್ಲಿಸಲಿ. ರಾಜ್ಯದ ಜನತೆ ಇಬ್ಬರಿಗೂ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.