Recent Posts

Tuesday, January 21, 2025
ಸುದ್ದಿ

ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡೀಸ್ ನಿಧನ – ಕಹಳೆ ನ್ಯೂಸ್

ಕೇಂದ್ರದಲ್ಲಿ ರಕ್ಷಣಾ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ  ಕರ್ನಾಟಕ ಮೂಲದ ಜಾರ್ಜ್ ಫರ್ನಾಂಡೀಸ್ ತಮ್ಮ ವಾಕ್ಚಾತುರ್ಯಕ್ಕೆ ಹೆಸರಾಗಿದ್ದರಲ್ಲದೇ ಕಾರ್ಮಿಕ ನಾಯಕರೆಂದೇ ಖ್ಯಾತಿ ಗಳಿಸಿದ್ದ ಜಾರ್ಜ್ ಫರ್ನಾಡೀಸ್ ವಿಧಿವಶರಾಗಿದ್ದಾರೆ.

ಹಲವು ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಕೇಂದ್ರ ಸಚಿವ, ಹಿರಿಯ ಸಮಾಜವಾದಿ ನಾಯಕ ಜಾರ್ಜ್ ಫರ್ನಾಂಡೀಸ್ ನಿಧನರಾಗಿದ್ದಾರೆ. ಜಾರ್ಜ್ ಫರ್ನಾಡೀಸ್ ಅವರಿಗೆ 88 ವರ್ಷ ವಯಸ್ಸಾಗಿದ್ದು, ಮನೆಯಲ್ಲೇ ವಿಧಿವಶರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಜೈಮೈರ್ ಕಾಯಿಲೆಯಿಂದ ಜಾರ್ಜ್ ಫರ್ನಾಂಡೀಸ್ ಬಳಲುತ್ತಿದ್ದು, ಅವರಿಗೆ ಯಾರನ್ನೂ ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಜಾರ್ಜ್ ಫರ್ನಾಂಡೀಸ್ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು