Tuesday, January 21, 2025
ಸುದ್ದಿ

ಪುತ್ತೂರು ಮಹಾಲಿಂಗೇಶ್ವರ ದೇವಾಲಯದ ಕೊಡಿಮರಕ್ಕೆ ಒಂದು ಪವನ್ ಚಿನ್ನ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು: ಮಹಾತೋಬಾರ ಮಹಾಲಿಂಗೇಶ್ವರ ದೇವಾಲಯದ ಕೊಡಿಮರಕ್ಕೆ ಪದ್ಮಶ್ರೀ ಕೆದಂಬಾಡಿ ಗುತ್ತುರವರಿಂದ ಒಂದು ಪವನ್ ಚಿನ್ನವನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿಯ ಅದ್ಯಕ್ಷರಾದ ಎನ್.ಸುಧಾಕರ್ ಶೆಟ್ಟಿಯವರ ಮೂಲಕ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಪದ್ಮಶ್ರೀ ಕೆದಂಬಾಡಿ ಗುತ್ತಿನ ಯಜಮಾನ ಶ್ರೀಧರ ರೈ, ಪತ್ನಿ ಪದ್ಮಾವತಿ ರೈ, ಮಕ್ಕಳಾದ ಕೃಷ್ಣಕುಮಾರ್ ರೈ ಕೆದಂಬಾಡಿ, ರತ್ನಾಕರ್ ರೈ ಕೆದಂಬಾಡಿ, ಸೀತಾರಾಮ ರೈ ಕೆದಂಬಾಡಿ, ವಸಂತ ಕುಮಾರ್ ರೈ ಕೆದಂಬಾಡಿ, ರೂಪಾ ಸೂರಜ್ ಶೆಟ್ಟಿ, ಶೋಭಾ ರಾಜೇಶ್ ಶೆಟ್ಟಿ, ಉದ್ಯಮಿ ಸೂರಜ್ ಶೆಟ್ಟಿ ಸಾಮೆತ್ತಡ್ಕ, ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ ಜಯರಾಮ ರೈ ಬಳಜ್ಜ, ಸರ‍್ಯಪ್ರಸನ್ನ ರೈ ಎಂಡೆಸಾಗು, ಹಿಂಜಾವೇಯ ಅಜಿತ್ ರೈ ಹೊಸಮನೆ, ತಿಂಗಳಾಡಿ ಸಿ.ಎ ಬ್ಯಾಂಕ್ ಮಾಜಿ ಅದ್ಯಕ್ಷ ಶಶಿಧರ್ ರಾವ್ ಬೊಳಿಕ್ಕಳ, ಜಯರಾಮ ರೈ ಮಿತ್ರಂಪಾಡಿ ಸೇರಿದಂತೆ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು